ರಾಜ್ಯ

ಜ.5: ಕೇರಳದಲ್ಲಿ ಮಲಬಾರ್ ಕನ್ನಡ ಸಂಗಮ


ಮಲಪ್ಪುರಂ : ದಕ್ಷಿಣ ಭಾರತದ ಅತ್ಯುನ್ನತ ವಿದ್ಯಾಲಯ ಜಾಮಿಆ ನೂರಿಯಾ ಅರಬಿಯಾ ಪಟ್ಟಿಕ್ಕಾಡ್ ಇದರ 62ನೇ ವಾರ್ಷಿಕ ಹಾಗೂ 60ನೇ ಸನದುದಾನ ಮಹಾ ಸಮ್ಮೇಳನದ ಭಾಗವಾಗಿ ಜನವರಿ 5 ಪೂರ್ವಾಹ್ನ 9:30 ಕ್ಕೆ ಕಾಲೇಜು ಕ್ಯಾಂಪಸ್ಸಿನಲ್ಲಿ ಮಲಬಾರ್ ಕನ್ನಡ ಸಂಗಮ  ನೆರವೇರಲಿದೆ.

ಮಲಬಾರ್ ಪ್ರದೇಶಗಳ ಕನ್ನಡಿಗರ ಸಮ್ಮೇಳಿಸಿ ನಡೆಯುವ ಕಾರ್ಯಕ್ರಮದಲ್ಲಿ ಕನ್ನಡ ಭಾಷೆ ಹಾಗೂ ಸಾಹಿತ್ಯ ವೈಭವದ ಚರ್ಚೆಗಳು ನಡೆಯಲಿದೆ. ಪ್ರಸ್ತುತ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಸ್ತಾದ್ ಅಬ್ದುಲ್ಲಾ ಫೈಝಿ ಕೊಡಗು ವಹಿಸಲಿದ್ದಾರೆ.ಕರ್ನಾಟಕ ರಾಜ್ಯ ಫೈಝೀಸ್ ಅಸೋಸಿಯೇಶನ್ ಅಧ್ಯಕ್ಷರಾಗಿರುವ ಉಸ್ತಾದ್ ಉಸ್ಮಾನ್ ಫೈಝಿ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲಿದ್ದಾರೆ.
ಪ್ರಖ್ಯಾತ ಸಾಹಿತಿಗಳು ಹಾಗೂ ಅಕ್ಕಮಹಾದೇವಿ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕರಾಗಿರುವ ಮೆಹಬೂಬ ಸಾಹೇಬ ವೈ
ಕನ್ನಡ ಸಂಗಮದಲ್ಲಿ ವಿಷಯ
ಮಂಡನೆ ಮಾಡಲಿದ್ದಾರೆ.

ಮಲಬಾರ್ ಕನ್ನಡ ಸಂಗಮ ಕಾರ್ಯಕ್ರಮದ ನೋಂದಣಿ ಪ್ರಾರಂಭವಾಗಿದೆ ಹಾಗೂ ಕಾರ್ಯಕ್ರಮದಲ್ಲಿ ಭಾಗವಹಿಸಿದವರಿಗೆ ಅಧಿಕೃತ ಪ್ರಮಾಣ ಪತ್ರ ಕೂಡ ದೊರಕಲಿದೆ ಎಂದು ಜಾಮಿಆದ ಕನ್ನಡ ಸಂಘಟನೆಯಾಗಿರುವ ಮಿಸ್ಬಾಹುಲ್ ಜಾಮಿಆ ಕನ್ನಡ ಸಂಘ ಪ್ರಕಟನೆ ನೀಡಿದೆ.

Leave a Reply

Your email address will not be published. Required fields are marked *

error: Content is protected !!