ಮುಖ್ಯಮಂತ್ರಿ ಪರಿಹಾರ ನಿಧಿಯಿಂದ 5.5 ಲಕ್ಷ ರೂ. ಪರಿಹಾರ ಬಿಡುಗಡೆ: ಶಾಸಕ ಅಶೋಕ್ ರೈ
ಪುತ್ತೂರು: ಪುತ್ತೂರು ಶಾಸಕ ಅಶೋಕ್ ರೈ ಅವರ ಶಿಫಾರಸ್ಸಿನಂತೆ ಪುತ್ತೂರು ವಿಧಾನಸಭಾ ಕ್ಷೇತ್ರದ ನಾಲ್ವರಿಗೆ ಒಟ್ಟು 6.5 ಲಕ್ಷ ರೂ ಮುಖ್ಯಮಂತ್ರಿ ಪರಿಹಾರ ನಿಧಿ ಬಿಡುಗಡೆಯಾಗಿದೆ ಎಂದು ಶಾಸಕ ಅಶೋಕ್ ರೈ ತಿಳಿಸಿದ್ದಾರೆ.
ಅನಾರೋಗ್ಯ ಪೀಡಿತ ಕಂಬಳಬೆಟ್ಟು ನಿವಾಸಿ ಮೈಮುನಾ ಅವರಿಗೆ 50 ಸಾವಿರ, ಬನ್ನೂರು ಗ್ರಾಮದ ನೀರ್ಪಾಜೆ ನಿವಾಸಿ ವೆಲೇರಿಯನ್ ಡಿಸೋಜಾ ಅವರಿಗೆ 2 ಲಕ್ಷ , ಕೆಯ್ಯೂರು ಗ್ರಾಮದ ನೂಜಿ ಪಕ್ಕಳ ನಿವಾಸಿ ಲೋಕನಾಥ ಪಕ್ಕಳ ಅವರಿಗೆ ಚಿಕಿತ್ಸಾ ವೆಚ್ಚ ರೂ 3 ಲಕ್ಷ ಪರಿಹಾರ ನಿಧಿಯಿಂದ ಬಿಡುಗಡೆಯಾಗಿದೆ. ಅನೇಕ ಮಂದಿ ಮುಖ್ಯಮಂತ್ರಿ ಪರಿಹಾರ ನಿಧಿ ಅಪೇಕ್ಷಿಸಿ ಅರ್ಜಿ ಸಲ್ಲಿಸಿದ್ದು ಹಂತ ಹಂತವಾಗಿ ಎಲ್ಲಾ ಅರ್ಜಿಗಳನ್ನು ಮುಖ್ಯಮಂತ್ರಿಗಳಿಗೆ ನೀಡಿ ಪರಿಹಾರ ನೀಡುವಲ್ಲಿ ಆಗ್ರಹಿಸಲಾಗುವುದು ಎಂದು ಶಾಸಕ ಅಶೋಕ್ ರೈ ತಿಳಿಸಿದ್ದಾರೆ.