ಇರಾನ್ ರಾಕೆಟ್ ದಾಳಿಯಿಂದ ರಕ್ಷಿಸಿಕೊಳ್ಳಲು ಬಂಕರ್’ನತ್ತ ಓಡಿದ್ದರೇ ಬೆಂಜಮಿನ್ ನೆತನ್ಯಾಹು?
ಇರಾನ್ ಸೇನಾ ಪಡೆ ಅ.1ರಂದು ರಾತ್ರಿ ಇಸ್ರೇಲ್ ಮೇಲೆ ಭಾರೀ ಪ್ರಮಾಣದ ರಾಕೆಟ್ ದಾಳಿ ನಡೆಸಿದ ಬಳಿಕ ವಿಡಿಯೋವೊಂದು ವೈರಲ್ ಆಗುತ್ತಿದ್ದು ಇರಾನ್ ರಾಕೆಟ್ ದಾಳಿಯಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಬಂಕರ್ ನತ್ತ ಓಡುತ್ತಿರುವ ದೃಶ್ಯ ವೈರಲ್ ಆಗಿದೆ..ಇದು ಅಸಲಿಯೋ ಅಥವಾ ನಕಲಿಯೋ? ಎನ್ನುವುದು ಭಾರೀ ಚರ್ಚೆಯಲ್ಲಿದೆ.
ಇರಾನ್ ಪರವಾದ ಸಾಮಾಜಿಕ ಜಾಲತಾಣ ಹ್ಯಾಂಡಲ್ಸ್ ನಲ್ಲಿ ಈ ವಿಡಿಯೋ ಕ್ಲಿಪ್ ಅನ್ನು ಶೇರ್ ಮಾಡಿದ್ದು, “ಬೆಂಜಮಿನ್ ನೆತನ್ಯಾಹು ಬಂಕರ್ ನತ್ತ ಓಡುತ್ತಿರುವುದು ಎಂಬುದಾಗಿ ಉಲ್ಲೇಖಿಸಲಾಗಿದೆ”.
ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಕ್ಷಣಗಳು… ಇರಾನ್ ಪ್ರತೀಕಾರ ಎದುರಿಸಿದ ನೆತನ್ಯಾಹು ಬಂಕರ್ ನತ್ತ ಓಡಿಹೋಗುತ್ತಿರುವುದು ಎಂಬುದಾಗಿ ಮತ್ತೊಂದು ಪೋಸ್ಟ್ ನಲ್ಲಿ ತಿಳಿಸಲಾಗಿದೆ.