ತಿರುಪತಿ ಲಡ್ಡು ಪ್ರಕರಣ: ವರದಿ ಕೇಳಿದ ಕೇಂದ್ರ ಸರಕಾರ
ತಿರುಪತಿ ಲಡ್ಡುವಿನಲ್ಲಿ ದನದ ಕೊಬ್ಬು, ಮೀನಿನ ಎಣ್ಣೆ ಬಳಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಆರೋಪ ಮಾಡಿರುವುದು ಲ್ಯಾಬ್ ವರದಿಯಲ್ಲಿ ಖಚಿತವಾಗಿದ್ದು ಇದೀಗ ಈ ಪ್ರಕರಣ ತೀವ್ರಗೊಳ್ಳುತ್ತಿದ್ದಂತೆ ಕೇಂದ್ರ ಸರ್ಕಾರ ಮಧ್ಯಪ್ರವೇಶ ಮಾಡಿದೆ.
ಘಟನೆ ಕುರಿತು ಕೇಂದ್ರ ಸರ್ಕಾರ ವರದಿ ಕೇಳಿದೆ.
ಕೇಂದ್ರ ಆರೋಗ್ಯ ಸಚಿವ ಜೆಪಿ ನಡ್ಡಾ ತಿರುಪತಿ ಲಡ್ಡು ಪ್ರಕರಣ ಕುರಿತು ವರದಿ ಕೇಳಿದ್ದಾರೆ. ಘಟನೆ ಕುರಿತು ವಿವರವಾದ ವರದಿ ನೀಡುವಂತೆ ನಡ್ಡಾ ಸೂಚಿಸಿದ್ದಾರೆ ಎಂದು ವರದಿಯಾಗಿದೆ . ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸುತ್ತಿದ್ದಂತೆ ಪ್ರಕರಣ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದೆ.