ಕರಾವಳಿ

ಸುಳ್ಯ ಆಲ್ ಇಂಡಿಯಾ KMCC ಸಭೆ: ಸೆ.5 ರಿಂದ 30ರ ವರೆಗೆ ಸದಸ್ಯತ್ವ ಅಭಿಯಾನಕ್ಕೆ ತೀರ್ಮಾನ

ಸುಳ್ಯ: ಆಲ್ ಇಂಡಿಯಾ KMCC ಸುಳ್ಯ ವಲಯದ ವಿಶೇಷ ಸಭೆ ಅರಂತೋಡು ತೆಕ್ಕಿಲ್ ಸಭಾಂಗಣದಲ್ಲಿ ಆ.28ರಂದು ಖಲಂದರ್ ಎಲಿಮಲೆಯವರ ಅಧ್ಯಕ್ಷತೆ ಯಲ್ಲಿ ನಡೆಯಿತು.


ಸೆಪ್ಟೆಂಬರ್ 5 ರಿಂದ 30 ರವರೆಗೆ ಸದಸ್ಯತ್ವ ಅಭಿಯಾನ ನಡೆಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಖಲಂದರ್ ಎಲಿಮಲೆಯವರು ಸದಸ್ಯತ್ವ ಅಭಿಯಾನ, ಆಂಬುಲನ್ಸ್ ಸೇವೆ, ಸಾಮೂಹಿಕ ವಿವಾಹ ಪಾಲಿಯೇಟಿವ್ ಕೇರ್ ಕೇರ್ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರು,
ಆಲ್ ಇಂಡಿಯಾ KMCC ವತಿಯಿಂದ ರಾಜ್ಯದ ಬೆಂಗಳೂರು, ಮೈಸೂರು, ಮಂಗಳೂರು ಸೇರಿದಂತೆ ವಿವಿದೆಡೆ ಆಂಬುಲನ್ಸ್ ಸೇವೆಯಿದ್ದು ಸುಳ್ಯದಲ್ಲೂ ಸೇವೆ ಆರಂಭಿಸಿದೆ ಎಂದರು.


ಅಲ್ ಇಂಡಿಯಾ KMCC ದ.ಕ ಜಿಲ್ಲಾ ಪ್ರದಾನ ಕಾರ್ಯದರ್ಶಿ ಅಫ್ಹಾಂ ಅಲೀ ತಂಙಳ್ KMCC ನೀಡುತ್ತಿರುವ ಸೇವೆಗಳ ಬಗ್ಗೆ ಸದಸ್ಯರಿಗೆ ವಿವರಿಸಿದರು,
KPCC ಪ್ರ.ಕಾರ್ಯದರ್ಶಿ ಟಿ.ಎಂ, ಶಹೀದ್ ಮಾತನಾಡಿ ವಯನಾಡ್ ದುರಂತ ಸಂದರ್ಭದಲ್ಲಿ KMCC ನೀಡಿದ ಸೇವೆಗಳ ಕುರಿತು ಪ್ರಶಂಸಿಸಿದರು.
ದ.ಕ ಜಿಲ್ಲಾ ಆಲ್ ಇಂಡಿಯಾ KMCC ಕೋಶಾಧಿಕಾರಿ ಇಬ್ರಾಹಿಂ ಹಾಜಿ, ಸುಳ್ಯ KMCC ಮೆಡಿಕಲ್ ಇಂಚಾರ್ಜ್ ಫೈಸಲ್ ಜಟ್ಟಿಪಲ್ಲ, ಶಾಹಿದ್ ಪಾರೆ, ಸಂಶುದ್ದೀನ್ ಆರಂತೋಡು, ಸಿರಾಜ್ ನೆಟ್ಟಾರ್, ತಾಜುದ್ದೀನ್ ಆರಂತೋಡು, ಹನೀಫ್ ಮುಕ್ವೆ, ಹನೀಫ್ ನಂದಿನಿ, ಆಶಿಕ್ ಆರಂತೋಡು, ಶಿಹಾಬ್ ಜಟ್ಟಿಪಲ್ಲ ಸಭೆಯಲ್ಲಿ ಬಾಗವಹಿಸಿದ್ದರು. ಸುಳ್ಯ ಆಲ್ ಇಂಡಿಯಾ KMCC ಪ್ರಧಾನ ಕಾರ್ಯದರ್ಶಿ ತಾಜುದ್ದೀನ್ ಟರ್ಲಿ ಸ್ವಾಗತಿಸಿ ವಂದಿಸಿದರು.

Leave a Reply

Your email address will not be published. Required fields are marked *

error: Content is protected !!