ಸದನದಲ್ಲಿ ಪ್ರತಿಭಟನೆ ಮಾಡುತ್ತಿದ್ದ ವಿರೋಧ ಪಕ್ಷದವರಿಗೆ ಚುಚ್ಚಿದ ಶಾಸಕ ಅಶೋಕ್ ರೈ
ಪುತ್ತೂರು: ಸದನದಲ್ಲಿ ಪ್ರತಿಭಟನೆ ಮಾಡುತ್ತಿದ್ದ ವಿರೋಧ ಪಕ್ಷದ ಸದಸ್ಯರನ್ನು ಮಾತಿನ ಮೂಲಕವೇ ಶಾಸಕ ಅಶೋಕ್ ರೈ ಚುಚ್ಚಿದ್ದಾರೆ.
ಪ್ರತಿಭಟನೆ ನಡೆಸುತ್ತಿದ್ದ ವಿರೋಧ ಪಕ್ಷದವರನ್ನುದ್ದೇಶಿಸಿ ಮಾತನಾಡಿದ ಶಾಸಕರು ಈ ದೇಶದಲ್ಲಿ ಎಲ್ಲದಕ್ಕೂ ಪರಿಹಾರ ಎಂಬುದು ಇದೆ, ಏನೇ ಸಮಸ್ಯೆ ಇದ್ದರೂ ಅದನ್ನು ಕೂತು ಬಗೆಹರಿಸಬೇಕು ಅದನ್ನು ಬಿಟ್ಟು ಸದನದಲ್ಲಿ ಬೊಬ್ಬೆ ಹಾಕಿದರೆ ಏನು ಪ್ರಯೋಜನ? ಜನ ನಮ್ಮನ್ನು ಆಯ್ಕೆ ಮಾಡಿ ಕಳಿಸಿದ್ದು ಸದನದಲ್ಲಿ ಕುಳಿತು ಬೊಬ್ಬೆ ಹಾಕುವುದಕ್ಕಲ್ಲ, ಅವರ ಕಷ್ಟಗಳಿಗೆ, ನೋವಿಗೆ ಸ್ಪಂದಿಸಲು. ಅದನ್ನು ಬಿಟ್ಟು ಸವ ಪ್ರತಿಷ್ಠೆಗಾಗಿ ಧರಣಿ, ಪ್ರತಿಭಟನೆ ನಡೆಸಿದರೆ ಏನೂ ಪ್ರಯೋಜನವಿಲ್ಲ. ನಿಮ್ಮ ಈ ಆಟವನ್ನು ರಾಜ್ಯದ ಜನ , ನಿಮಗೆ ವೋಟು ಹಾಕಿದ ಜನ ಗಮನಿಸುತ್ತಿದ್ದಾರೆ. ಸಮಸ್ಯೆಗಳೇನೇ ಇದ್ದರೂ ಅದನ್ನು ಒಟ್ಟಿಗೇ ಕುಳಿತು ಚರ್ಚಿಸಿ ಅದಕ್ಕೆ ಪರಿಹಾರ ಕಂಡುಕೊಳ್ಳುವಲ್ಲಿ ಶ್ರಮಿಸಬೇಕು ಎಂದು ವಿರೋಧ ಪಕ್ಷದ ಸದಸ್ಯರಿಗೆ ಮಾತಿನ ಮೂಲಕವೇ ತಿವಿದರು.