ಕರಾವಳಿ

ಸುಳ್ಯ: ಸರ್ವ ಧರ್ಮಿಯರೊಂದಿಗೆ ಈದ್ ಆಚರಿಸಿ ಸೌಹಾರ್ದ ಸಂದೇಶ ಸಾರಿದ ಮುಸ್ಲಿಂ ಮುಖಂಡರು


ಸುಳ್ಯ: ಶಾಂತಿ, ಸೌಹಾರ್ದತೆ ಮತ್ತು ಆತ್ಮ ಸಂಸ್ಕರಣೆ ದಾನ ಧರ್ಮ ಗಳ ಆಶಯದೊಂದಿಗೆ ಆಚರಿಸಲ್ಪಡುವ ಈದುಲ್ ಫಿತ್ರ ರಂಜಾನ್ ಹಬ್ಬವನ್ನು ಸುಳ್ಯದ ಸಾಮಾಜಿಕ ಮುಖಂಡರುಗಳು, ಜನಪ್ರತಿನಿದಿಗಳು ವಿಶಿಷ್ಟ ರೀತಿಯಲ್ಲಿ ಆಚರಿಸಿದರು.


ವಿವಿದ ಧಾರ್ಮಿಕ ಕೇಂದ್ರಗಳಿಗೆ, ಸಾಮಾಜಿಕ, ಧಾರ್ಮಿಕ ಮುಖಂಡರುಗಳು, ಪತ್ರಕರ್ತರು ಪೌರಕಾರ್ಮಿಕರು, ಅಧಿಕಾರಿಗಳು, ಮತ್ತು ಕಾರ್ಮಿಕ ರೊಂದಿಗೆ ಭೇಟಿಯಾಗಿ ಈದ್ ಸಂದೇಶವನ್ನು ಸಾರಿ, ಗಿಫ್ಟ್ ಸಿಹಿ ತಿಂಡಿ ಹಂಚಿ ಸಂಭ್ರಮಿಸಿದರು.


ಸುಳ್ಯ ತಹಶೀಲ್ದಾರ್ ಜಿ. ಮಂಜುನಾಥ್,ಸುಳ್ಯ ಸೈoಟ್ ಬ್ರಿಡ್ಜ್ಸ್ ಚರ್ಚ್ ನ ಧರ್ಮ ಗುರುಗಳಾದ ರೆ. ಫಾ. ವಿಕ್ಟರ್ ಡಿ ಸೋಜಾ ಉದ್ಯಮಿ ಧನಂಜಯ ಅಡಪoಗಾಯ, ಕ್ಷೇತ್ರ ಶಿಕ್ಷಣಾಧಿಕಾರಿ ರಮೇಶ್, ಸುಳ್ಯ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಈರಯ್ಯ,ಪ್ರೆಸ್ ಕ್ಲಬ್ ಗೆ ಭೇಟಿ ನೀಡಿ ಪತ್ರಕರ್ತರು, ಚೆನ್ನಕೇಶವ ದೇವಸ್ಥಾನ ದ ಅನುವಂಶಿಕ ಆಡಳಿತ ಮೊಕ್ತೇಸರರಾದ ಡಾ. ಹರಪ್ರಸಾದ್, ಕೇಶವ ಕೃಪಾ ವೇದ ಪಾಠ ಶಾಲೆಯ ವೇದಮೂರ್ತಿ ಪುರೋಹಿತ್ ನಾಗರಾಜ ಭಟ್ , ಸುಳ್ಯ ನಗರ ಪಂಚಾಯತ್ ಮುಖ್ಯಾಧಿಕಾರಿ ಬಿ. ಎನ್. ಡಾoಗೆ, ಪೌರ ಕಾರ್ಮಿಕರು, ಗಾಂಧಿನಗರ ಪೆಟ್ರೋಲ್ ಪಂಪ್ ನಲ್ಲಿ ದುಡಿಯುವ ದಿನಗೂಲಿ ಕಾರ್ಮಿಕರು ಮೊದಲಾದವರನ್ನು ಭೇಟಿ ಮಾಡಿ ಈದ್ ಶುಭಾಶಯ ಸಲ್ಲಿಸಲಾಯಿತು.


ಈ ಸಂದರ್ಭದಲ್ಲಿ ಗಾಂಧಿನಗರ ಜುಮ್ಮಾ ಮಸ್ಜಿದ್ ಅಧ್ಯಕ್ಷ ಕೆ. ಎಂ. ಮುಸ್ತಫ, ನಗರ ಪಂಚಾಯತ್ ಸದಸ್ಯರುಗಳಾದ ಶರೀಫ್ ಕಂಠಿ, ಕೆ. ಎಸ್. ಉಮ್ಮರ್, ಧೀರ ಕ್ರಸ್ತ, ರಿಯಾಜ್ ಕಟ್ಟೆಕ್ಕಾರ್, ಸಿದ್ದೀಕ್ ಕೋಕೋ, ಇಂಟಕ್ ಅಧ್ಯಕ್ಷ ಶಾಫಿ ಕುತ್ತಾಮೊಟ್ಟೆ ಮೊದಲಾದವರು ಉಪಸ್ಥಿತರಿದ್ದರು

Leave a Reply

Your email address will not be published. Required fields are marked *

error: Content is protected !!