ಎ.3ರಂದು ನನ್ನ ನಿರ್ಧಾರ ಪ್ರಕಟ- ಸುಮಲತಾ
ಬೆಂಗಳೂರು: ನನ್ನ ಬೆಂಬಲಿಗರು ಮಂಡ್ಯದಿಂದ ಸ್ಪರ್ಧಿಸುವಂತೆ ನನ್ನಲ್ಲಿ ಹೇಳುತ್ತಿದ್ದಾರೆ, ಆದರೆ ನಾನು ಏನನ್ನೂ ನಿರ್ಧರಿಸಿಲ್ಲ, ಎ.3 ರಂದು ಕಾರ್ಯಕರ್ತರ ಜೊತೆ ಸಭೆ ನಡೆಸಿ ಅಂತಿಮ ನಿರ್ಧಾರ ಪ್ರಕಟಿಸುವುದಾಗಿ ಸುಮಲತಾ ಹೇಳಿದ್ದಾರೆ.
ಮಂಡ್ಯದಲ್ಲಿ ಬಿಜೆಪಿಗೆ ಬೆಂಬಲ ನೀಡುವಂತೆ ಪಕ್ಷದ ವರಿಷ್ಟರು ಹೇಳುತ್ತಿದ್ದಾರೆ ಮತ್ತು ತನಗೆ ಸೂಕ್ತ ಸ್ಥಾನಮಾನ ಕಲ್ಪಿಸುವ ಭರವಸೆಯನ್ನೂ ನೀಡಿದ್ದಾರೆ ಎಂದಿರುವ ಸುಮಲತಾ ನನ್ನ ಮುಂದಿನ ನಡೆಯನ್ನು ಎ.3ರಂದು ತಿಳಿಸುವುದಾಗಿ ಹೇಳಿದ್ದಾರೆ.
ಸುಮಲತಾ ಹೇಳಿಕೆ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದ್ದು ಅವರು ಪಕ್ಷೇತರರಾಗಿ ಸ್ಪರ್ಧಿಸುತ್ತಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ.