ಕರಾವಳಿ

ಪುತ್ತೂರು: ವಿವಾಹ ಸಮಾರಂಭದಲ್ಲಿ ಮಾದಕ ವ್ಯಸನ ಮುಕ್ತ ಸಮಾಜ ನಿರ್ಮಾಣದ ಜಾಗೃತಿ ಕಾರ್ಯಕ್ರಮ ನಡೆಸಿ ಮಾದರಿಯಾದ ಕಡಬದ ಮದುಮಗ

ಪುತ್ತೂರು: ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಇಲಾಖೆಯಲ್ಲಿ ಮಾಹಿತಿದಾರರಾಗಿ ಸೇವೆ ಸಲ್ಲಿಸುತ್ತಿರುವ ಕಡಬದ ಕಮಾಲುದ್ದೀನ್ ರವರು ತಮ್ಮ ವಿವಾಹ ಸಮಾರಂಭದಲ್ಲಿ ಮಾದಕ ವ್ಯಸನ ಮುಕ್ತ ಸಮಾಜ ನಿರ್ಮಾಣ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಿ ಮಾದರಿ ವಿವಾಹ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದ್ದಾರೆ.

ಪುತ್ತೂರು ಪರ್ಪುಂಜದ ಅಬ್ರೋಡ್ ಮಲ್ಟಿಪ್ಲೆಕ್ಸ್ ಆಡಿಟೋರಿಯಮ್ ನಲ್ಲಿ ಕಮಾಲುದ್ದೀನ್ ರವರು ಸುಳ್ಯದ ನಾವೂರು ನಿವಾಸಿ ಫಾತಿಮತ್ ಫರೀದಾರೊಂದಿಗೆ ಸೆಪ್ಟೆಂಬರ್ 17ರಂದು ದಾಂಪತ್ಯ ಜೀವನಕ್ಕೆ ಕಾಲಿರಿಸಿದರು.

ಈ ಕಾರ್ಯಕ್ರಮದಲ್ಲಿ ಅಂತರಾಷ್ಟ್ರೀಯ ತರಬೇತುದಾರ ರಫೀಕ್ ಮಾಸ್ಟರ್ ಮಂಗಳೂರು ಭಾಗವಹಿಸಿ ಕಾರ್ಯಗಾರವನ್ನು ನಡೆಸಿದ್ದಾರೆ.
ಧಾರ್ಮಿಕ ಸಂಘಟನೆಯ ಮುಖಂಡರುಗಳಾದ ಡಾ.ಅಬ್ದುಲ್ ರಶೀದ್ ಝೈನಿ,ಎಸ್ ಬಿ ಧಾರಿಮಿ ಮೊದಲಾದ ನೇತಾರರು ವಿವಾಹ ಸಂದರ್ಭದಲ್ಲಿ ಭಾಗವಹಿಸಿ ಈ ಕಾರ್ಯಕ್ರಮದ ಕುರಿತು ಮಾತನಾಡಿ ಶ್ಲಾಘನೆ ವ್ಯಕ್ತಪಡಿಸಿ ವಧು ವರರಿಗೆ ಶುಭ ಹಾರೈಸಿದರು.

Leave a Reply

Your email address will not be published. Required fields are marked *

error: Content is protected !!