ಕರಾವಳಿ

ಕೋಡಿಂಬಾಡಿ : ಗ್ರಾಪಂ ವ್ಯಾಪ್ತಿಯಲ್ಲಿರುವ ಅನಧಿಕೃತ ಜಾಹಿರಾತು ಫಲಕ ತೆರವುಗೊಳಿಸಲು ವಾರಗಳ ಗಡುವು: ಬದಿನಾರ್


ಪುತ್ತೂರು: ಕೋಡಿಂಬಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ರಸ್ತೆ ಬದಿಯಲ್ಲಿ ಹಾಕಲಾದ ಅನಧಿಕೃತ ಜಾಹಿರಾತು ಫಲಕ, ಜಾಹಿರಾತು ಕಟೌಟ್ ಗಳನ್ನು ತೆರವು ಗೊಳಿಸಲು ಗ್ರಾಮ ಪಂಚಾಯತ್ ಸಂಬಂದಿಸಿದವರಿಗೆ ಏಳು ದಿನ ಗಡುವು ವಿಧಿಸಿದ್ದು ಅನಧಿಕೃತ ಫಲಕಗಳ ಮಾಲಕರು ತಕ್ಷಣ ಗ್ರಾಪಂ ಕಚೇರಿಯನ್ನು ಸಂಪರ್ಕಿಸಿ ಪರವಾನಿಗೆ ಪಡೆದುಕೊಳ್ಳುವಂತೆ ಕೋಡಿಂಬಾಡಿ ಗ್ರಾಪಂ ಉಪಾಧ್ಯಕ್ಷರಾದ ಜಯಪ್ರಕಾಶ್ ಬದಿನಾರ್ ತಿಳಿಸಿದ್ದಾರೆ.


ಗ್ರಾಪಂ ವ್ಯಾಪ್ತಿಯ ಪುತ್ತೂರು-ಉಪ್ಪಿನಂಗಡಿ ರಸ್ತೆ ಬದಿಗಳಲ್ಲಿ ಗ್ರಾಪಂ ಅನುಮತಿ ಪಡೆಯದೆ ಜಾಹಿರಾತು ಕಟೌಟುಗಳನ್ನು ಹಾಕಲಾಗಿದೆ. ಈ ವಿಚಾರ ಗ್ರಾಪಂ ಗಮನಕ್ಕೆ ತಂದಿಲ್ಲ. ಗ್ರಾಪಂ ವ್ಯಾಪ್ತಿಯಲ್ಲಿ ಯಾವುದೇ ಫಲಕಗಳನ್ನು ಹಾಕುವಲ್ಲಿ ಗ್ರಾಪಂ ಪರವಾನಿಗೆ ಅಗತ್ಯವಾಗಿದೆ. ಆದರೆ ಗ್ರಾಪಂ ವ್ಯಾಪ್ತಿಯಲ್ಲಿ ಹಾಕಿರುವ ಜಾಹಿರಾತು ಫಲಕದಾರರು ಯಾವುದೇ ಅನುಮತಿಯನ್ನು ಪಡೆಯದೆ ಬ್ಯಾನರ್ ,ಫಲಕಗಳನ್ನು ಹಾಕಿದ್ದು ಅಂಥಹ ಅನಧಿಕೃತ ಕಟೌಟ್, ಬ್ಯಾನರ್ ಗಳನ್ನು ವಾರದೊಳಗೆ ತೆರವು ಗೊಳಿಸಬೇಕು ಇಲ್ಲವಾದರೆ ಅವುಗಳನ್ನು ಜೆಸಿಬಿ ಮೂಲಕ ತೆರವು ಮಾಡಲಾಗುವುದು ಎಂದು ಅವರು ಹೇಳಿದ್ದಾರೆ.

ಗ್ರಾಪಂ ಅನುಮತಿಯಿಲ್ಲದೆ ಕಟೌಟ್, ಜಾಹಿರಾತು ಫಲಕ ಹಾಕುವ ಮೂಲಕ ಅನೇಕ‌ ವರ್ಷಗಳಿಂದ ಗ್ರಾಪಂಗೆ ನಷ್ಟ ಉಂಟು ಮಾಡುತ್ತಿರುವ ಅನಧಿಕೃತ ಜಾಹಿರಾತು ಸಂಸ್ಥೆಯ ವಿರುದ್ದ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಗ್ರಾಪಂ ಉಪಾಧ್ಯಕ್ಷರಾದ ಜಯಪ್ರಕಾಶ್ ಬದಿನಾರ್ ಎಚ್ಚರಿಸಿದ್ದಾರೆ.

20 ಕ್ಕೂ‌ಮಿಕ್ಕಿ ಅನಧಿಕೃತ ಜಾಹಿರಾತು ಬ್ಯಾನರ್: ಗ್ರಾಪಂ ವ್ಯಾಪ್ತಿಯಲ್ಲಿ ಸುಮಾರು 20 ಕ್ಕೂ ಮಿಕ್ಕಿ ಅನಧಿಕೃತ ಜಾಹಿರಾತು ಬ್ಯಾನರ್ , ಕಟೌಟ್ ಗಳಿದ್ದು ಅವುಗಳೆಲ್ಲವನ್ನೂ ತೆರವು ಮಾಡಲಾಗುವುದು ಎಂದು ಉಪಾಧ್ಯಕ್ಷರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!