ಪ್ರಧಾನಿ ಮೋದಿ, ಮುಖ್ಯಮಂತ್ರಿ ಯೋಗಿಯವರಿಗೆ ಬೆದರಿಕೆ ಹಾಕಿದ ಬಾಲಕ ಪೊಲೀಸ್ ವಶಕ್ಕೆ
ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಮುಗಿಸುವುದಾಗಿ ಮಾಧ್ಯಮ ಸಂಸ್ಥೆಗೆ ಇಮೇಲ್ ಕಳುಹಿಸಿದ ಲಕ್ನೋದ ಬಾಲಕನನ್ನು ನೋಯ್ಡಾ ಪೊಲೀಸರು ಎ.7ರಂದು ಬಂಧಿಸಿದ್ದಾರೆ ಎಂದು ವರದಿಯಾಗಿದೆ.

ಬಿಹಾರ ಮೂಲದ 16 ವರ್ಷದ ಬಾಲಕ ಬಂಧಿತನಾಗಿದ್ದು ಆತನ ವಿರುದ್ಧ ಎ.5ರಂದು ಇಲ್ಲಿನ ಸೆಕ್ಟರ್ 20 ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಿಸಲಾಗಿತ್ತು
ಬಾಲಕನನ್ನು ಇಲ್ಲಿನ ಬಾಲಾಪರಾಧಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ತಿಳಿದು ಬಂದಿದೆ.