ಟೆಸ್ಟ್ ಕ್ರಿಕೆಟ್’ನಲ್ಲಿ ಶತಕದ ಬರ ನೀಗಿಸಿಕೊಂಡ ವಿರಾಟ್ ಕೊಹ್ಲಿ
ಅಹಮದಾಬಾದ್: ಟೆಸ್ಟ್ ಕ್ರಿಕೆಟ್ ನಲ್ಲಿ ವಿರಾಟ್ ಕೊಹ್ಲಿ ತನ್ನ ಶತಕದ ಬರವನ್ನು ಕೊನೆಗೂ ನೀಗಿಸಿಕೊಂಡಿದ್ದಾರೆ.

ಟೆಸ್ಟ್ ಕ್ರಿಕೆಟ್ ನ 28ನೇ ಶತಕ ಬಾರಿಸಿದ ವಿರಾಟ್ ಕೊಹ್ಲಿ ಶತಕದ ಸಂಭ್ರಮವನ್ನು ವಿಶಿಷ್ಟವಾಗಿ ಆಚರಿಸಿದರು. ತನ್ನ ಕತ್ತಿನ ಸರದಲ್ಲಿದ ಉಂಗುರಕ್ಕೆ ಮುತ್ತಿಕ್ಕಿದ ವಿರಾಟ್ ಭಾವನಾತ್ಮಕವಾಗಿ ಸಂಭ್ರಮಾಚರಿಸಿದರು.
2019ರ ನವೆಂಬರ್ ಬಳಿಕ ವಿರಾಟ್ ಮೊದಲ ಶತಕ ಬಾರಿಸಿದರು. ಅಂದು ಬಾಂಗ್ಲಾ ವಿರುದ್ಧ ಶತಕ ಬಾರಿಸಿದ್ದ ವಿರಾಟ್, ಬರೋಬ್ಬರಿ 1207 ದಿನಗಳ ಬಳಿಕ ಟೆಸ್ಟ್ ಶತಕ ಬಾರಿಸಿದ್ದಾರೆ. ಇದು ವಿರಾಟ್ ಕೊಹ್ಲಿ ವೃತ್ತಿಜೀವನದ 75ನೇ ಅಂತಾರಾಷ್ಟ್ರೀಯ ಶತಕವಾಗಿದೆ.





