ಒಂದೇ ಸ್ಕೂಟರ್ ನಲ್ಲಿ 6 ಮಂದಿ ಪ್ರಯಾಣಿಸುತ್ತಿದ್ದಾಗ ಪಿಕಪ್ ಡಿಕ್ಕಿ- ನಾಲ್ವರು ದುರ್ಮರಣ
ಪಿಕಪ್ ಮತ್ತು ಸ್ಕೂಟರ್ ನಡುವಿನ ಭೀಕರ ಅಪಘಾತದಲ್ಲಿ ಒಂದೇ ಕುಟುಂಬದ ನಾಲ್ವರು ಮೃತಪಟ್ಟು, ಇಬ್ಬರು ಗಂಭೀರ ಗಾಯಗೊಂಡಿರುವ ಘಟನೆ ಮಹಾರಾಷ್ಟ್ರ ಲಾತೂರ್ ನಲ್ಲಿ ಮಾ.4ರಂದು ನಡೆದಿದೆ.

ಒಂದೇ ಕುಟುಂಬದ 6 ಮಂದಿ ಒಂದೇ ಸ್ಕೂಟರ್ ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ.
ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಪಿಕಪ್ ಸ್ಕೂಟರ್‌ಗೆ ಢಿಕ್ಕಿ ಹೊಡೆದಿದ್ದು ಈ ವೇಳೆ ಸ್ಕೂಟರ್ ನಲ್ಲಿದ್ದ ನಾಲ್ವರು(ಇಬ್ಬರು ಮಕ್ಕಳು ಸೇರಿ) ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಉಳಿದ ಇಬ್ಬರಿಗೆ ಗಂಭೀರ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ತಿಳಿದು ಬಂದಿದೆ.