ಜಿಲ್ಲೆ

ಕೇರಳ: ಶಾಲಾ ಬಾಲಕನಂತೆ ಮದುಮಗನನ್ನು ಕರೆತಂದ ಸ್ನೇಹಿತರು-ವಿಡಿಯೋ ವೈರಲ್



ಕೇರಳ: ಸೋಷಿಯಲ್ ಮೀಡಿಯಾಗಳಲ್ಲಿ ಅತೀ ಹೆಚ್ಚಾಗಿ ಟ್ರೇಡಿಷನಲ್‌ಗೆ ಹೆಸರುವಾಸಿಯಾಗಿರುವ ಕೇರಳ ರಾಜ್ಯದಲ್ಲಿ ಮದುವೆ ಕಾರ್ಯಕ್ರಮಯೊಂದರಲ್ಲಿ ಮದುಮಗ ಶಾಲಾ ಬಾಲಕನಂತೆ ಕರೆ ತರುವ ದೃಶ್ವಯವೊಂದು ಇತ್ತಿಚೇಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.



ಮದುವೆ ಕಾರ್ಯಕ್ರಮದಲ್ಲಿ ಮದುಮಗನನ್ನೇ ಶಾಲೆಗೆ ಹೋಗುವ ಬಾಲಕನಂತೆ ವೇಷ ಧರಿಸಿ, ಆತನಿಗೆ ಶಾಲಾ ಸಮವಸ್ತ ಧರಿಸಿದಲ್ಲದೇ ಬೆನ್ನ ಮೇಲೆ ಬ್ಯಾಗ್ ಹೊತ್ತುಕೊಂಡು ಮದುಮಗನನ್ನು ಸಿದ್ಧಪಡಿಸಿರುವಂತೆ ವಿಡಿಯೋ ವೈರಲ್ ಆಗುತ್ತಿದೆ.

ಮಧುಮಗಳ ಬಳಿ ಬರುವ ಮಧುಮಗನು ಕೂಡ ಸಣ್ಣ ಬಾಲಕನಂತೆ ವರ್ತಿಸಿ ಅಲ್ಲಿರುವವನನ್ನು ರಂಜಿಸಿದ್ದಾನೆ. ಯುವಕನಂತೆ ಇರುವ ಈ ಬಾಲಕನ ವರ್ತನೆಗೆ ಧಾರ್ಮಿಕ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.



ಈ ಹಿಂದೆಯೂ ಕೇರಳ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮದುವೆ ಕಾರ್ಯಕ್ರಮದಲ್ಲಿ ವಿಚಿತ್ರವಾಗಿ ವಧು- ವರನನ್ನು ಮಂಟಪಕ್ಕೆ ಕರೆತರುವುದು, ಅನಗತ್ಯ ಕಾರ್ಯ ಚಟುವಟಿಕೆಗಳನ್ನು ಮಾಡುವುದು ಸಾಮಾಜಿಕ ಜಾಲತಾಣದಲ್ಲಿ ಕಂಡಿದ್ದೇವೆ. ಕೊಯಿಕ್ಕೋಡ್ ಜಿಲ್ಲೆಯಲ್ಲಿ ನಡೆದ ಮದುವೆ ಕಾರ್ಯಕ್ರಮ ಎಂದು ಎನ್ನಲಾಗುತ್ತಿದೆ.

Leave a Reply

Your email address will not be published. Required fields are marked *

error: Content is protected !!