ಮಂಗಳೂರು: ಆಟೋದಲ್ಲಿ ಕುಕ್ಕರ್ ಬಾಂಬ್ ಬ್ಲಾಸ್ಟ್ ಪ್ರಕರಣದ ಶಂಕಿತ ಆರೋಪಿ ಎನ್ನಲಾದ ಶಾರೀಕ್ ಅವರ ಕುಟುಂಬಸ್ಥರು ಮಂಗಳೂರಿಗೆ ಆಗಮಿಸಿದ್ದಾರೆ.
ಶಾರೀಕ್ ಗುರುತು ಪತ್ತೆಗೆ ಮೂವರು ಮಹಿಳೆಯರು ಆಗಮಿಸಿದ್ದಾರೆ. ಮಹಿಳೆಯರ ಜೊತೆ ಪ್ರಕರಣದ ತನಿಖಾಧಿಕಾರಿಯೂ ಬಂದಿದ್ದಾರೆ. ಶಂಕಿತ ಉಗ್ರ ಹಾಗೂ ಆಟೋ ಚಾಲಕ ಪುರುಷೋತ್ತಮ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.