ಕರಾವಳಿ

ಕುಂಬ್ರ: ಆಕ್ಟಿವಾದಲ್ಲಿರಿಸಿದ್ದ ಹೆಲ್ಮೆಟ್ ಕಳ್ಳತನ..!



ಪುತ್ತೂರು: ವ್ಯಕ್ತಿಯೊಬ್ಬರು ಕುಂಬ್ರದಲ್ಲಿ ನಿಲ್ಲಿಸಿ ಹೋಗಿದ್ದ ದ್ವಿಚಕ್ರ ವಾಹನದಿಂದ ಹೆಲ್ಮೆಟ್ ಕಳವಾಗಿರುವ ಘಟನೆ ನ.19ರಂದು ನಡೆದಿದೆ.


ತಿಂಗಳಾಡಿ ನಿವಾಸಿ ರಫೀಕ್ ಎಂಬವರು ತಮ್ಮ ಆಕ್ಟಿವಾವನ್ನು ಕುಂಬ್ರದ ಲಕ್ಷ್ಮೀ ಮೆಡಿಕಲ್ ಬಳಿ ನಿಲ್ಲಿಸಿ ಬೇರೆಡೆಗೆ ಹೋಗಿದ್ದು ಮರಳಿ ಬರುವಾಗ ಹೆಲ್ಮೆಟ್ ಕಣ್ಮರೆಯಾಗಿತ್ತು.
ಇತ್ತೀಚೆಗೆ ಕುಂಬ್ರದಲ್ಲಿ ಸ್ಕೂಟರ್ ನಿಂದ ಇಬ್ಬರು ವ್ಯಕ್ತಿಗಳು ಹೆಲ್ಮೆಟ್ ಕಳ್ಳತನ ನಡೆಸುತ್ತಿರುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿತ್ತು.

Leave a Reply

Your email address will not be published. Required fields are marked *

error: Content is protected !!