ರಾಜ್ಯ

10 ಲಕ್ಷ ರೂ.ಗೆ ಬೇಡಿಕೆ ಒಡ್ಡಿದ್ದ ವಿಶೇಷ ತಹಶೀಲ್ದಾರ್ ಸಹಿತ ಇಬ್ಬರು ಲೋಕಾಯುಕ್ತ ಬಲೆಗೆ



ಬೆಂಗಳೂರು: ಭೂಮಿಯ ಖಾತೆಯಲ್ಲಿ ತಪ್ಪಾಗಿರುವ ಹೆಸರು ಸರಿ ಮಾಡಿಕೊಡಲು 10 ಲಕ್ಷ ರೂ.ಗೆ ಬೇಡಿಕೆ ಒಡ್ಡಿದ್ದ ವಿಶೇಷ ತಹಸೀಲ್ದಾರ್ ಮತ್ತು ಏಜೆಂಟ್ ಲೋಕಾಯುಕ್ತ ಬಲೆಗೆ ಸೆರೆಸಿಕ್ಕಿದ್ದಾರೆ.

ಸಾಂದರ್ಭಿಕ ಚಿತ್ರ

ಬೆಂಗಳೂರು ನಗರ ಉತ್ತರ ತಾಲೂಕು ವಿಶೇಷ ತಹಸೀಲ್ದಾರ್ ವರ್ಷಾ ಒಡೆಯರ್ ಮತ್ತು ಏಜೆಂಟ್ ರಮೇಶ್ ಲೋಕಾಯಕ್ತ ಬಲೆಗೆ ಸಿಲುಕಿದವರು.

ಆರೋಪಿಗಳ ವಿರುದ್ಧ ಎ್ಐಆರ್ ದಾಖಲಿಸಿ ಲೋಕಾಯುಕ್ತ ವಿಶೇಷ ಕೋರ್ಟ್‌ಗೆ ಹಾಜರುಪಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!