ಕ್ರೈಂ

ಶಿಖರದ ತುದಿಯಿಂದ ಗರ್ಭಿಣಿ ಪತ್ನಿಯನ್ನು ದೂಡಿ ಹಾಕಿ ಕೊಲೆ ಮಾಡಿದ ಪತಿ!



ಅಂಕಾರಾ (ಟರ್ಕಿ): ಶಿಖರದ ತುತ್ತ ತುದಿಯಲ್ಲಿ ಗರ್ಭಿಣಿ ಪತ್ನಿಯೊಂದಿಗೆ ನಗು ನಗುತ್ತಲೇ ಸೆಲ್ಫಿಗೆ ಪೋಸ್ ನೀಡಿದ ಪತಿರಾಯ, ಮರುಕ್ಷಣವೇ ಆಕೆಯನ್ನು ಬೆಟ್ಟದಿಂದ ದೂಡಿ ಕೊಲೆ ಮಾಡಿರುವ ಘಟನೆ ಟರ್ಕಿಯಲ್ಲಿ 2018ರಲ್ಲಿ ನಡೆದಿತ್ತು. ಇದು ಆಕಸ್ಮಿಕ ಘಟನೆಯಲ್ಲಿ ಕೊಲೆ ಎಂಬುದು 2021ರಲ್ಲಿ ಬಯಲಾಗಿತ್ತು. ಇದೀಗ ನ್ಯಾಯಾಲಯ ಆರೋಪಿ ಪತಿಗೆ 30 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಯನ್ನು ವಿಧಿಸಿದೆ.

ಸೆಮ್ರಾ ಅಯ್ಸಾಲ್ (32) ಮೃತ ದುರ್ದೈವಿ. ಆರೋಪಿ ಪತಿ ಹಕನ್ ಅಯ್ಸಾಲ್ (40) ಮಾಡಿದ ತಪ್ಪಿಗೆ ಇದೀಗ ಶಿಕ್ಷೆಗೆ ಗುರಿಯಾಗಿದ್ದಾನೆ. ಗರ್ಭಿಣಿ ಪತ್ನಿಯೊಂದಿಗೆ ಆರೋಪಿ ಹಕನ್, ಟರ್ಕಿಯ ಮುಗ್ಲಾ ನಗರದ ಬಟರ್ಫ್ಲೈ ಕಣಿವೆಗೆ ರಜಾ ದಿನದಂದು ತೆರಳಿದ್ದರು. ಈ ವೇಳೆ ಏಳು ತಿಂಗಳ ಗರ್ಭಿಣಿಯಾಗಿದ್ದ ಸೆಮ್ರಾಳನ್ನು ಬೆಟ್ಟದಿಂದ ದೂಡಿ ಕೊಲೆ ಮಾಡಿದ್ದನು. ಒಟ್ಟಿಗೆ ಶಿಖರವೇರಿದ್ದ ದಂಪತಿ ಸಾಕಷ್ಟು ಫೋಟೋಗಳನ್ನು ತೆಗೆದುಕೊಂಡಿದ್ದರು. ಇದಾದ ಕೆಲವೇ ಕ್ಷಣಗಳಲ್ಲಿ ಹತ್ಯೆ ಮಾಡಿದ್ದಾನೆ.

Leave a Reply

Your email address will not be published. Required fields are marked *

error: Content is protected !!