ರಾಜ್ಯರಾಷ್ಟ್ರೀಯ

ಬಳ್ಳಾರಿ: ಭಾರತ್ ಜೋಡೋ ಸಮಾವೇಶದ ಮೈದಾನಕ್ಕೆ ಹರಿದು ಬರುತ್ತಿರುವ ಜನಸಾಗರ

ಬಳ್ಳಾರಿ: ಇಲ್ಲಿನ ಮುನ್ಸಿಪಲ್ ಮೈದಾನದಲ್ಲಿ ಭಾರತ್ ಜೋಡೊ ಯಾತ್ರೆ ಅಂಗವಾಗಿ ಶನಿವಾರ ಹಮ್ಮಿಕೊಂಡಿರುವ ಬಹಿರಂಗ ಸಮಾವೇಶದ ಸ್ಥಳಕ್ಕೆ ಜನಸಾಗರವೇ ಹರಿದು ಬರುತ್ತಿದೆ.

ಕಲ್ಯಾಣ ಕರ್ನಾಟಕದ ಜಿಲ್ಲೆಗಳಾದ ವಿಜಯನಗರ, ಬಳ್ಳಾರಿ, ರಾಯಚೂರು, ಕೊಪ್ಪಳ, ಯಾದಗಿರಿ, ಕಲಬುರಗಿ ಹಾಗೂ ಕಿತ್ತೂರು ಕರ್ನಾಟಕದ ವಿಜಯಪುರ, ಬೆಳಗಾವಿ, ಬಾಗಲಕೋಟೆ ಸೇರಿದಂತೆ ಇತರೆ ಜಿಲ್ಲೆಗಳಿಂದಲೂ ಕಾಂಗ್ರೆಸ್ ಕಾರ್ಯಕರ್ತರು ವಾಹನಗಳಲ್ಲಿ ಬಂದಿದ್ದಾರೆ.

ಕಾಂಗ್ರೆಸ್ ಪಕ್ಷದ ಬಾವುಟ, ಭಾರತ್ ಜೋಡೊ ಬರಹವುಳ್ಳ ಫಲಕ, ರಾಹುಲ್ ಗಾಂಧಿ ಭಾವಚಿತ್ರವಿರುವ ಫಲಕಗಳನ್ನು ಹಿಡಿದುಕೊಂಡು ಹೆಜ್ಜೆ ಹಾಕುತ್ತ ಕಾರ್ಯಕ್ರಮ ಸ್ಥಳ ತಲುಪುತ್ತಿದ್ದಾರೆ.

ಬಳ್ಳಾರಿಯ ಎಲ್ಲ ರಸ್ತೆ, ವೃತ್ತ ಹಾಗೂ ಸಮಾವೇಶ ನಡೆಯುತ್ತಿರುವ ಮುನ್ಸಿಪಲ್ ಮೈದಾನದಲ್ಲಿ ನಾಯಕರ ಬೃಹತ್ ಕಟೌಟ್, ಬ್ಯಾನರ್, ಫ್ಲೆಕ್ಸ್ ಗಳು ರಾರಾಜಿಸುತ್ತಿವೆ.

Leave a Reply

Your email address will not be published. Required fields are marked *

error: Content is protected !!