ಮಂಗಳೂರು: ಹೊತ್ತಿ ಉರಿದ ಗುಜಿರಿ ಅಂಗಡಿ; ಅಪಾರ ನಷ್ಟ
ಮಂಗಳೂರು: ಗುಜಿರಿ ಅಂಗಡಿಯಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಗುಜರಿ ಅಂಗಡಿ ಸಂಪೂರ್ಣ ಸುಟ್ಟು ಭಸ್ಮವಾದ ಘಟನೆ ನಡೆದಿದೆ.

ನಗರದ ಕ್ಲಾಕ್ ಟವರ್ ಬಳಿಯ ಗುಜಿರಿ ಅಂಗಡಿಯಲ್ಲಿ ಇಂದು ಮುಂಜಾನೆ ಬೆಂಕಿ ಕಾಣಿಸಿ ಕೊಂಡಿದ್ದು, ಅದರ ಪಕ್ಕದಲ್ಲಿರುವ ವಸ್ತ್ರ ಮಳಿಗೆಗೂ ಬೆಂಕಿ ಆವರಿಸಿಕೊಂಡ ಘಟನೆ ನಡೆದಿದೆ.
ಶಾರ್ಟ್ ಸರ್ಕ್ಯೂಟ್ ನಿಂದಾಗಿ ಬೆಂಕಿ ಹೊತ್ತಿಕೊಂಡಿದೆ ಎನ್ನಲಾಗುತ್ತಿದೆ. ಪಕ್ಕದಲ್ಲಿರುವ ಅಂಗಡಿಗೂ ಬೆಂಕಿ ಆವರಿಸಿ ಕೊಂಡಿದೆ. ಬಾರಿ ದೊಡ್ಡ ಪ್ರಮಾಣದಲ್ಲಿ ಬೆಂಕಿಯಿಂದಾಗಿ ಬಾರಿ ಪ್ರಮಾಣದ ಸೊತ್ತು ಹಾನಿಯಾಗಿದೆ. ಬೆಂಕಿ ನಂದಿಸುವಲ್ಲಿ ಅಗ್ನಿಶಾಮಕದಳದ ಸಿಬ್ಬಂದಿಗಳು ಬೆಂಕಿ ಹರಸಾಹಸ ಪಡಬೇಕಾಯಿತು. ಘಟನೆಯಿಂದ ಲಕ್ಷಾಂತರ ರೂ ನಷ್ಟ ಸಂಭವಿಸಿದೆ.