ರಾಜ್ಯ

ಖಿದ್ಮಾ ಲೇಖನ ಸ್ಪರ್ಧೆಯ ಫಲಿತಾಂಶ ಪ್ರಕಟ

ಸಂವಿಧಾನ ಶಿಲ್ಪಿ ಬಾಬಾಸಾಹೇಬ ಅಂಬೇಡ್ಕರ್ ಅವರ ಜಯಂತಿಯ ಪ್ರಯುಕ್ತ ಖಿದ್ಮಾ ಫೌಂಡೇಶನ್ ಕರ್ನಾಟಕ ಆಯೋಜಿಸಲಾಗಿದ್ದ ರಾಜ್ಯ ಮಟ್ಟದ ಲೇಖನ ಸ್ಪರ್ಧೆಯ ಫಲಿತಾಂಶ ಪ್ರಕಟಗೊಂಡಿದೆ.

ಪ್ರಥಮ ಹಿರಿಯ ವೈದ್ಯ ಅಧಿಕಾರಿ ಡಾ. ಸುರೇಶ್ ನೆಗಳಗುಳಿ, ದ್ವಿತೀಯ: ಶ್ರೀಮತಿ ಸ್ವಪ್ನ ಆರ್.ಎ ಹಾಗೂ ತೃತೀಯ ಸ್ಥಾನ ಡಾ. ಪೂರ್ಣಿಮಾ ಧಾಮಣ್ಣವರ ಪಡೆದುಕೊಂಡರೆ ತೀರ್ಪುಗಾರರಿಂದ ಝುಲೇಖ ಮಮ್ತಾಝ್, ಕು. ಜ್ಯೋತಿ ಆನಂದ ತಂದುಕೊಂಡರು, ರೇಣುಖಾ ಬಂಗಾರಪ್ಪನವರ, ಪಲ್ಲವಿ ಎಂ.ಓ ಹಾಗೂ ಪ್ರತಿಭಾ ಬಿ ತಲ್ಲೂರ ಅವರು ಮೆಚ್ಚುಗೆಯನ್ನು ಪಡೆದುಕೊಂಡಿದ್ದಾರೆ. ಲೇಖನ ಸ್ಪರ್ಧೆಗೆ ಹಿರಿಯ ಸಾಹಿತಿಗಳು ಹಾಗೂ ವಕೀಲರಾದ ಬಿ. ಎಸ್. ಅಪರಂಜಿ, ಶಿಕ್ಷಕರು, ಲೇಖಕರಾದ ಮೊಹಮ್ಮದ್ ಹುಮಾಯುನ್ ಎನ್ ಹಾಗೂ ಶಿಕ್ಷಕಿ, ಅಂಕಣ ಬರಹಗಾರರಾದ ಅಶ್ವಿನಿ ಎಸ್ ಅಂಗಡಿ ಬಾದಾಮಿ ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದರು.
ಶನಿವಾರ ಸಂಜೆ ಗೂಗಲ್ ಮೀಟ್ ಮೂಲಕ ನಡೆದ ಫಲಿತಾಂಶ ಪ್ರಕಟಣಾ ಕಾರ್ಯಕ್ರಮದಲ್ಲಿ ಯುವ ಲೇಖಕ ಮೆಹಬೂಬಸಾಹೇಬ.ವೈ.ಜೆ., ಖಿದ್ಮಾ ಫೌಂಡೇಶನ್ ಅಧ್ಯಕ್ಷ ಆಮಿರ್ ಅಶ್ಅರೀ ಬನ್ನೂರು, ಯುವ ಲೇಖಕಿ ಕುಮಾರಿ ಅಮರಲತಾ ಬೆಂಗಳೂರು ಭಾಗವಹಿಸಿದ್ದರು ಎಂದು ಖಿದ್ಮಾ ಫೌಂಡೇಶನ್ ಪ್ರಧಾನ ಕಾರ್ಯದರ್ಶಿ ಅಮಿತಾ ಅಶೋಕ್ ಪ್ರಸಾದ್ ಬೆಂಗಳೂರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!