ಮುಂಡೂರು: ದ.ಗ್ರಾ.ಯೋಜನೆಯ ‘ಸಂಪೂರ್ಣ ಸುರಕ್ಷಾ’ ಚೆಕ್ ಹಸ್ತಾಂತರ
ಪುತ್ತೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮುಂಡೂರು ಒಕ್ಕೂಟದ ಶಾರದ ಸ್ವಸಹಾಯ ಸಂಘದ ಸದಸ್ಯರಾದ ಸುಜಾತ ರಾಜೀವ ನಾಯ್ಕರವರ ಮಗಳ ಚಿಕಿತ್ಸೆಗೆ ಸಂಪೂರ್ಣ ಸುರಕ್ಷಾದಿಂದ ಮಂಜೂರಾದ 36000 ರೂ. ಮೊತ್ತದ ಚೆಕ್ ಅನ್ನು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಕೆಮ್ಮಿಂಜೆ ವಲಯಾಧ್ಯಕ್ಷರಾದ ಅರುಣ್ ಕುಮಾರ್ ಪುತ್ತಿಲ ಹತ್ತಾಂತರಿಸಿದರು.

ಪುತ್ತೂರು ತಾಲೂಕು ಯೋಜನಾಧಿಕಾರಿ ಶಶಿಧರ್ ಎಂ, ವಲಯ ಮೇಲ್ವಿಚಾರಕಿ ಮೋಹಿನಿ ಎಸ್ ಗೌಡ, ಒಕ್ಕೂಟ ಉಪಾಧ್ಯಕ್ಷ ಬಾಲಚಂದ್ರ ಗೌಡ ಕಡ್ಯ, ಮುಂಡೂರು ಗ್ರಾ. ಪಂ ಸದಸ್ಯ ಬಾಲಕೃಷ್ಣ ಪೂಜಾರಿ, ಸೇವಾ ಪ್ರತಿನಿಧಿ ಗೀತಾ ಉಪಸ್ಥಿತರಿದ್ದರು.