ಮೇನಾಲ ಮಧುರಾ ಇಂಟರ್ ನ್ಯಾಷನಲ್ ಸ್ಕೂಲ್ ನಲ್ಲಿ ಪೋಷಕರ ಸಭೆ
ಪುತ್ತೂರು: ಮೇನಾಲ ಮಧುರಾ ಇಂಟರ್ ನ್ಯಾಷನಲ್ ಸ್ಕೂಲ್ ನಲ್ಲಿ ಪೋಷಕರ ಸಭೆ ನಡೆಯಿತು. ಪ್ರಾರ್ಥನೆಯ ಮುಖಾಂತರ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಸಂಸ್ಥೆಯ ಶೈಕ್ಷಣಿಕ ಕಾರ್ಯನಿರ್ವಾಹಕ ನಿರ್ದೇಶಕರಾದ ರಫೀಕ್ ಮಾಸ್ಟರ್ ರವರು ಮಕ್ಕಳ ಬೆಳವಣಿಗೆಯಲ್ಲಿ ತಂದೆ ತಾಯಿಯರ ಪಾತ್ರ ಅತ್ಯಮೂಲ್ಯವಾದದ್ದು ಹಾಗೂ ಎಲ್ಲಾ ರೀತಿಯ ಮೌಲ್ಯಗಳು ಪ್ರಾರಂಭಗೊಳ್ಳುವುದು ಮತ್ತು ಕಲಿಯುವುದು ಮನೆಯ ವಾತಾವರಣದಿಂದ ಜೊತೆಗೆ ಉತ್ತಮವಾದ ಸಂಬಂಧಗಳಿಂದ, ಈ ರೀತಿ ಶಿಕ್ಷಣ ಪ್ರಬಲ ಮತ್ತು ಪರಿಣಾಮಕಾರಿಯಾದ ಅಸ್ತ್ರ ಆಗಬೇಕು ಎಂದು ತಿಳಿಸಿದರು.
ಸಂಸ್ಥೆಯ ನಿರ್ದೇಶಕ ಬಾತಿಶಾ ಕನಕಮಜಲು ಮಾತನಾಡಿ ಸಾಮಾಜಿಕ ಜಾಲತಾಣದ ಬಳಕೆಯಿಂದ ಮಕ್ಕಳ ಬೆಳವಣಿಗೆಯ ಮೇಲೆ ಬೀರುವ ದುಷ್ಪರಿಣಾಮಗಳ ಬಗ್ಗೆ ಸವಿವರವಾಗಿ ತಿಳಿಸಿಕೊಟ್ಟರು.
ಮಧುರಾ ವಿದ್ಯಾಸಂಸ್ಥೆಯ ಅಧ್ಯಕ್ಷ ಹನೀಫ್ ಮಧುರಾ, ಆಡಳಿತಾಧಿಕಾರಿ ಅಬ್ದುಲ್ ರಹಿಮಾನ್ ಸಂಸ್ಥೆಯ ಮುಖ್ಯ ಶಿಕ್ಷಕಿ ತಪಸ್ವಿನಿ.ಆರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಮುಖ್ಯ ಶಿಕ್ಷಕಿ ತಪಸ್ವಿನಿ ಸ್ವಾಗತಿಸಿ, ಶಿಕ್ಷಕಿ ಫಾತಿಮತ್ ಶಫ್ರೀನಾ ವಂದಿಸಿದರು. ಶಿಕ್ಷಕಿ ಮನೋದ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಶಿಕ್ಷಕ ಹಾಗೂ ಶಿಕ್ಷಕೇತರ ವೃಂದದವರು ಉಪಸ್ಥಿತರಿದ್ದರು.