ರೂ.3 ಲಕ್ಷ ಬಂಡವಾಳದಲ್ಲಿ ಟೊಮೆಟೋ ಬೆಳೆದು 30 ಲಕ್ಷ ರೂ. ಸಂಪಾದಿಸಿದ ರೈತ
ಟೊಮೆಟೊ ಟೊಮೆಟೊ ಬೆಳೆಗಾರರಿಗೆ ಉತ್ತಮ ಬೆಲೆ ಸಿಗುತ್ತಿದೆ. ಚಿಕ್ಕಮಗಳೂರು ಜಿಲ್ಲೆಯ ರೈತರೊಬ್ಬರು ಮೂರು ಲಕ್ಷ ಬಂಡವಾಳ ಹೂಡಿ ಟೊಮೆಟೊ ಬೆಳೆದು 30 ಲಕ್ಷ ರೂ. ಆದಾಯಗಳಿಸಿದ್ದಾರೆ.
ಕಡೂರು ತಾಲೂಕಿನ ಅಂತರಘಟ್ಟೆ ಕುಮಾರಪ್ಪ ಅವರು ಬೆಳೆದ ಟೊಮೆಟೊಗೆ ಉತ್ತಮ ಬೆಲೆ ಸಿಕ್ಕಿದ್ದು, 3 ಲಕ್ಷ ರೂ. ಬಂಡವಾಳ ಹಾಕಿ ಟೊಮೆಟೊ ಬೆಳೆದಿದ್ದ ಅವರಿಗೆ 30 ಲಕ್ಷ ರೂ. ಲಾಭಗಳಿಸಿದ್ದಾರೆ. ಪ್ರತೀ ವರ್ಷ ಟೊಮೆಟೊ ಬೆಳೆದು ರೈತರು ಕೈ ಸುಟ್ಟುಕೊಳ್ಳುತ್ತಿದ್ದರು. ಆದರೆ, ಈ ವರ್ಷ ಟೊಮೆಟೊಗೆ ಭಾರೀ ಬೆಲೆ ಬಂದಿದ್ದು, ಬೆಲೆ ಇದ್ದರೂ ಬೆಳೆ ಇಲ್ಲದಂತಾಗಿದೆ. ದಿನದಿಂದ ದಿನಕ್ಕೆ ಟೊಮೆಟೊ ಬೆಲೆ ಏರಿಕೆಯಾಗುತ್ತಿದ್ದು, ಟೊಮೆಟೊ ಬೆಳೆಯುತ್ತಿರುವ ರೈತರು ಸಂತಸದಲ್ಲಿದ್ದಾರೆ.