ಕರಾವಳಿ

ಬೆಳಂದೂರು ಈಡನ್ ಗ್ಲೋಬಲ್ ಸ್ಕೂಲ್‌ನಲ್ಲಿ ವಿದ್ಯಾರ್ಥಿಗಳ ಮತದಾನ, ಪ್ರಮಾಣ ವಚನ ಸ್ವೀಕಾರ

ಪುತ್ತೂರು: ಈಡನ್ ಗ್ಲೋಬಲ್ ಸ್ಕೂಲ್ ಬೆಳಂದೂರು ಇಲ್ಲಿ 2023-24ನೇ ಸಾಲಿನ ಶೈಕ್ಷಣಿಕ ವರ್ಷದ ವಿದ್ಯಾರ್ಥಿ ಕ್ಯಾಬಿನೆಟ್ ಚುನಾವಣೆ ನಡೆಯಿತು. 8,9,10ನೇ ತರಗತಿಯ ವಿದ್ಯಾರ್ಥಿಗಳು ವಿವಿಧ ಹುದ್ದೆಗಳಿಗೆ ನಾಮಪತ್ರ ಸಲ್ಲಿಸಿದರು. ಅಭ್ಯರ್ಥಿಗಳು ಪ್ರಚಾರ ಕಾರ್ಯ ಕೈಗೊಂಡು ತಮ್ಮ ತಮ್ಮ ಚುನಾವಣಾ ಪ್ರಣಾಳಿಕೆಗಳನ್ನು ರಚಿಸಿ ತಾನು ಆ ಸ್ಥಾನಕ್ಕೆ ಸರಿಯಾದ ಆಯ್ಕೆ ಎಂದು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಲು ಆಕರ್ಷಕ ಪೋಸ್ಟರ್‌ಗಳನ್ನು ತಯಾರಿಸಿ ಶಾಲೆಯಲ್ಲಿ ಪ್ರಚಾರ ನಡೆಸಿದರು. ಮತದಾನ ಪ್ರಕ್ರಿಯೆಯಲ್ಲಿ 600 ಕ್ಕೂ ಹೆಚ್ಚು ವಿದ್ಯಾರ್ಥಿಗಳು ತಮ್ಮ ಮತ ಚಲಾಯಿಸಿದರು.

ಶಾಲಾ ಮುಖ್ಯ ಚುನಾವಣಾಧಿಕಾರಿಯಾದ ಸ್ಮಿತ ಅವರ ನೇತತ್ವದಲ್ಲಿ ಚುನಾವಣಾ ಫಲಿತಾಂಶವನ್ನು ಪ್ರಕಟಿಸಲಾಯಿತು. ಶಾಲಾ ನಾಯಕನಾಗಿ ಮುಹಮ್ಮದ್ ಸುಹಾನ್ ಹಾಗೂ ಶಾಲಾ ನಾಯಕಿಯಾಗಿ ಅಮ್ನಾ ಫಾತಿಮಾ ಚುಣಾಯಿತರಾದರು. ಕ್ರೀಡಾ ನಾಯಕನಾಗಿ ಮುಹಮ್ಮದ್ ಮಿದ್ಲಾದ್, ಕ್ರೀಡಾ ನಾಯಕಿಯಾಗಿ ಫಾತಿಮತ್ ರೀಹಾ, ಆರೋಗ್ಯ ಮತ್ತು ಶಿಸ್ತು ನಾಯಕನಾಗಿ ಮುಹಮ್ಮದ್ ಅಜೀಂ ಡಿ, ನಾಯಕಿಯಾಗಿ ಕತೀಜಾ ತಕಿಯಾ, ಸಾಂಸ್ಕೃತಿಕ ಸಂಘದ ನಾಯಕನಾಗಿ ಶಫೀಜ್, ನಾಯಕಿಯಾಗಿ ಆಯಿಷಾ ರಿಫಾ ಆಯ್ಕೆಯಾದರು.

ನಂತರ ವಿದ್ಯಾರ್ಥಿ ಸಂಪುಟದಲ್ಲಿ ನೂತನವಾಗಿ ಸ್ಥಾನ ಪಡೆದ ಎಲ್ಲಾ ವಿದ್ಯಾರ್ಥಿಗಳಿಗೆ ಪ್ರಮಾಣ ವಚನ ಬೋಧಿಸಲಾಯಿತು. ಅತಿಥಿಯಾಗಿ ಆಗಮಿಸಿದ್ದ ಶಾಲೆಯ ನಿರ್ವಹಣಾ ಸಮಿತಿಯ ಸದಸ್ಯರಾದ ಅಬ್ದುಲ್ ಖಾದರ್ ಹಾಜಿ ಅವರು ವಿದ್ಯಾರ್ಥಿ ಪ್ರತಿನಿಧಿಗಳಿಗೆ ತಮ್ಮ ಕರ್ತವ್ಯಗಳ ಬಗ್ಗೆ ಅರಿವು ಮೂಡಿಸಿ ಶುಭ ಹಾರೈಸಿದರು.

ಪ್ರಮಾಣ ವಚನ ಕಾರ್ಯಕ್ರಮದ ನೇತೃತ್ವ ವಹಿಸಿದ್ದ, ಶಾಲಾ  ಪ್ರಾಂಶುಪಾಲರಾದ ರಂಝಿ ಮೊಹಮ್ಮದ್ ಮತ್ತು ಅರೇಬಿಕ್ ವಿಭಾಗದ ಮುಖ್ಯಸ್ಥರಾದ ರಶೀದ್ ಸಖಾಫಿ ಅವರು ಸಂಪುಟದಲ್ಲಿ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಬ್ಯಾಡ್ಜ್ ಧರಿಸಿ ಅಭಿನಂದಿಸಿದರು.

ಶಾಲಾ ಚುನಾವಣಾ ಆಯೋಗದ ಸದಸ್ಯರಾದ ಕುಮಾರಿ ಪ್ರಜ್ವಲಾ ಸ್ವಾಗತಿಸಿದರು. ಸೋಫಿಯಾ ರೋಚ್ ಕಾರ್ಯಕ್ರಮ ನಿರೂಪಸಿದರು. ಸವಿತಾ ಕುಮಾರಿ ವಂದಿಸಿದರು. ಶಾಲಾ ಚುನಾವಣಾ ಆಯೋಗದ ಅಧ್ಯಕ್ಷೆ ಸ್ಮಿತ, ಸದಸ್ಯರಾದ ಪವಿತ್ರ, ಶ್ವೇತಾ, ಕುಮಾರಿ ಸಿನ್ವಾನ ಮತ್ತು ಎಲ್ಲಾ ಅಧ್ಯಾಪಕ ವೃಂದದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!