ಕೊಡಗು ಜಿಲ್ಲಾಡಳಿತ ಭವನದ ತಡೆಗೋಡೆ ಕಳಪೆ ಪ್ರಕರಣ: ಪಿಡಬ್ಲ್ಯೂಡಿ ಇಲಾಖೆಯ ಕಿರಿಯ ಇಂಜಿನಿಯರ್ ಅಮಾನತು
ಮಡಿಕೇರಿಯ ಕೊಡಗು ಜಿಲ್ಲಾಡಳಿತ ಭವನದ ತಡೆಗೋಡೆ ಕಳಪೆ ಕಾಮಗಾರಿ ಪ್ರಕರಣ ಕುರಿತು ಪಿಡಬ್ಲ್ಯೂಡಿ ಇಲಾಖೆಯ ಕಿರಿಯ ಇಂಜಿನಿಯರ್ ಕೆ ಎಲ್ ದೇವರಾಜು ಎಂಬುವರನ್ನು ಹುದ್ದೆಯಿಂದ ಅಮಾನತು ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಮಾಣಿ ಮೈಸೂರು ಸಂಪರ್ಕಿಸುವ ರಸ್ತೆ ಬದಿಯಲ್ಲಿ ಈ ಬೃಹತ್ ತಡೆಗೋಡೆ ನಿರ್ಮಿಸಲಾಗಿದ್ದು ಕಳೆದ ವರ್ಷದ ಮಳೆಗಾಲದಲ್ಲಿ ಈ ಎಲ್ಲಾ ತಡೆಗೋಡೆಗಳು ಬಿರುಕು ಬಿಟ್ಟಿದ್ದವು.ಮುನ್ನೆಚ್ಚರಿಕಾ ಕ್ರಮವಾಗಿ ತಡೆಗೋಡೆಗೆ ಅಳವಡಿಸಲಾಗಿದ್ದ ಸ್ಲಾಬ್ ಗಳನ್ನು ತೆರವುಗೊಳಿಸಿ ಇದೀಗ ಪ್ಲಾಸ್ಟಿಕ್ ಹೊದಿಕೆಯನ್ನು ಹಾಕಲಾಗಿದೆ.
ಕಾಮಗಾರಿ ನಡೆಸುವ ಸಂದರ್ಭದಲ್ಲಿ ಜಪಾನ್ ತಂತ್ರಜ್ಞಾನದಿಂದ ಈ ತಡೆಗೋಡೆ ಮಾಡುವ ಸಬೂಬು ನೀಡಿ ಕೋಟಿಗಟ್ಟಲೆ ಹಣ ಖರ್ಚುವಹಿಸಿ ತಡೆಗೋಡೆಯನ್ನು ನಿರ್ಮಿಸಲಾಗಿತ್ತು. ತಡೆಗೋಡೆಯ ಕಳಪೆ ಕಾಮಗಾರಿಯ ಮಾಧ್ಯಮಗಳಲ್ಲಿ ವರದಿಗಳು ಭಿತ್ತರಗೊಂಡಿದ್ದವು.
ಇದರ ಕಳಪೆ ಗುಣಮಟ್ಟವನ್ನು ಅರಿತ ವಿರಾಜಪೇಟೆ ಶಾಸಕ ಪೊನ್ನಣ್ಣನವರು ಲೋಕಪಯೋಗಿ ಸಚಿವರಿಗೆ ದೂರು ನೀಡಿದ್ದು ದೂರು ಸ್ವೀಕರಿಸಿರುವ ಸಚಿವರು ಕ್ರಮ ಕೈಗೊಂಡಿದ್ದಾರೆ ಎಂದು ತಿಳಿದುಬಂದಿದೆ.