ಪುತ್ತೂರು: ಮಾನವೀಯತೆ ಮೆರೆದ ಶಾಸಕ ಅಶೋಕ್ ರೈ
ಪುತ್ತೂರು ತಾಲೂಕಿನ ಮುಕ್ರಂಪಾಡಿ ಎಂಬಲ್ಲಿ ರಿಕ್ಷಾಗಳ ನಡುವೆ ಸಂಭವಿಸಿದ ಅಪಘಾತದಲ್ಲಿ ಒಂದು ರಿಕ್ಷಾ ಪಲ್ಟಿಯಾಗಿ ರಿಕ್ಷಾದಲ್ಲಿದ್ದ ಬಾಲಕ ಸಹಿತ ಕೆಲವು ಮಂದಿ ಸಣ್ಣಪುಟ್ಟ ಗಾಯಗೊಂಡಿದ್ದಾರೆ.
ಇದೇ ಸಂದರ್ಭದಲ್ಲಿ ಅದೇ ಮಾರ್ಗವಾಗಿ ಕೆಯ್ಯೂರಿಗೆ ಕಾರ್ಯಕ್ರಮವೊಂದಕ್ಕೆ ಆಗಮಿಸುತ್ತಿದ್ದ ಶಾಸಕ ಅಶೋಕ್ ಕುಮಾರ್ ರೈಯವರ ಕಾರು ಘಟನೆ ನಡೆದ ಸ್ಥಳಕ್ಕೆ ತಲುಪಿದ್ದು ತಕ್ಷಣವೇ ಶಾಸಕ ಅಶೋಕ್ ಕುಮಾರ್ ರೈಯವರು ಕಾರು ನಿಲ್ಲಿಸುವಂತೆ ಹೇಳಿ ಕಾರಿನಿಂದ ಇಳಿದು ಬಂದು ಗಾಯಾಳುಗಳನ್ನು ಉಪಚರಿಸಿ ಆಸ್ಪತ್ರೆಗೆ ಕಳುಹಿಸುವ ವ್ಯವಸ್ಥೆ ಮಾಡಿದ್ದು ಅಲ್ಲದೆ ಪಲ್ಟಿಯಾದ ರಿಕ್ಷಾವನ್ನು ಎದ್ದು ನಿಲ್ಲಿಸಲು ಕೈ ಜೋಡಿಸಿದ್ದು ಜನರ ಪ್ರಶಂಸೆಗೆ ಪಾತ್ರವಾಗಿದೆ.