ಕೊಡಗು :ಗುಂಡೇಟಿನಿಂದ ಕಾಡಾನೆ ಸಾವು
ಕೊಡಗು ಜಿಲ್ಲೆಯ ಕುಶಾಲನಗರ ತಾಲೂಕು
ಬಾಳುಗೋಡು ಎಂಬಲ್ಲಿ ಸುಮಾರು 18ರಿಂದ 20 ವರ್ಷದ ಹೆಣ್ಣು ಆನೆ ದುಷ್ಕರ್ಮಿಗಳ ಅಟ್ಟಹಾಸಕ್ಕೆ ಬಲಿಯಾಗಿದೆ ಎನ್ನಲಾಗಿದೆ.

ಶನಿವಾರ ರಾತ್ರಿ ಆನೆಗೆ ಗುಂಡು ಹಾರಿಸಿ ಯಾರೋ ಕಿಡಿಗೇಡಿಗಳು ಹತ್ಯೆಗೈದಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಘಟನಾ ಸ್ಥಳಕ್ಕೆ ಅರಣ್ಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಆರೋಪಿಗಳನ್ನು ಪತ್ತೆ ಹಚ್ಚುವ ಕಾರ್ಯಕ್ಕೆ ಮುಂದಾಗಿದ್ದಾರೆ.
ಅರಣ್ಯ ಅಧಿಕಾರಿಗಳಾದ ಕೊಡಗು ಜಿಲ್ಲಾ DFO ಶಿವರಾಮ್ ಬಾಬು. ವಲಯ ಅರಣ್ಯಾಧಿಕಾರಿ ಶಿವರಾಮ್, ಉಪವಲಯ ಅರಣ್ಯಾಧಿಕಾರಿಗಳ ಅನಿಲ್
ಡಿಸೋಜ, ದೇವಯ್ಯ, ರಂಜನ್ ಹಾಗು RRT ಸಿಬ್ಬಂದಿಗಳು ಪರಿಶೀಲನೆ ನಡೆಸಿದ್ದಾರೆ.





