ಪುತ್ತೂರಿನಲ್ಲಿ ಬಿಜೆಪಿ ನಾಯಕರಿಗೆ ಶ್ರದ್ದಾಂಜಲಿ ಅರ್ಪಿಸಿ ಬ್ಯಾನರ್ ಹಾಕಿದ ಪ್ರಕರಣ- ಮತ್ತೆ 7 ಮಂದಿ ಪೊಲೀಸ್ ವಶಕ್ಕೆ
ಪುತ್ತೂರು ಬಸ್ ನಿಲ್ದಾಣದ ಬಳಿ ಬಿಜೆಪಿ ಹೀನಾಯವಾಗಿ ಸೋಲಲು ಕಾರಣಕರ್ತರಾದ ನಿಮಗೆ ಭಾವಪೂರ್ಣ ಶ್ರದ್ದಾಂಜಲಿ” ಎಂದು ನೊಂದ ಹಿಂದು ಕಾರ್ಯಕರ್ತರೆಂಬ ಹೆಸರಿನಲ್ಲಿ ಚಪ್ಪಲಿ ಹಾರ ಹಾಕಿ ಶ್ರದ್ದಾಂಜಲಿ ಬ್ಯಾನರ್ ಪ್ರಕರಣಕ್ಕೆ ಸಂಬಂಧಿಸಿ ಮತ್ತೆ ಏಳು ಮಂದಿ ಆರೋಪಿಗಳನ್ನು ಪೊಲೀಸರು ಮೇ 15ರ ತಡರಾತ್ರಿ ವಶಕ್ಕೆ ಪಡೆದುಕೊಂಡಿರುವುದಾಗಿ ವರದಿಯಾಗಿದೆ.
ಇಬ್ಬರನ್ನು ಪೊಲೀಸರು ಮೊದಲೇ ಬಂಧಿಸಿದ್ದು ಬ್ಯಾನರ್ ಅಳವಡಿಸುವ ವೇಳೆ ಸುಮಾರು 15ರಷ್ಟು ಇದ್ದರು ಎನ್ನಲಾಗಿದೆ.