ಕರಾವಳಿರಾಜಕೀಯ

ನನಗೆ ಸಿಗುತ್ತಿರುವ ಜನ ಬೆಂಬಲವನ್ನು ಐ.ಟಿ ದಾಳಿಯ ಮೂಲಕ ತಡೆಯಲು ಸಾಧ್ಯವಿಲ್ಲ: ಅಶೋಕ್ ರೈ



ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ನನಗೆ ಜನರಿಂದ ಸಿಗುತ್ತಿರುವ ಅಭೂತಪೂರ್ವ ಬೆಂಬಲ ಕಂಡು ಕಂಗಲಾಗಿರುವ ಬಿಜೆಪಿ ನನ್ನ ಮೇಲೆ ಐಟಿ ದಾಳಿಯ ಪ್ರಯೋಗ ಮಾಡುತ್ತಿದೆ. ಇದಕ್ಕೆಲ್ಲ ಬೆದರುವ ವ್ಯಕ್ತಿ ನಾನಲ್ಲ. ನಾನು ಅನೇಕ ವರ್ಷಗಳಿಂದ ವ್ಯವಹಾರ ಮಾಡುತ್ತಿದ್ದ ಅವೆಲ್ಲವೂ ಪಾರದರ್ಶಕವಾಗಿ ಮತ್ತು ಪ್ರಾಮಾಣಿಕವಾಗಿ ಇದೆ. ಐಟಿ ದಾಳಿಯ ಮುಖಾಂತರ ನನ್ನನ್ನು ಮಟ್ಟ ಹಾಕಬಹುದು ಎಂದು ಯಾರು ನಿರೀಕ್ಷೆ ಮಾಡಬೇಡಿ ಎಂದು ಪುತ್ತೂರು ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ ಹೇಳಿದ್ದಾರೆ.

ನಾನು ಜನಸೇವೆಗಾಗಿ ಈ ಕ್ಷೇತ್ರಕ್ಕೆ ಬಂದವನು. ನಾನು ಈ ಹಿಂದಿನಿಂದಲೂ ಬಡವರ ಪರವಾಗಿ ಕೆಲಸ ಕಾರ್ಯಗಳನ್ನು ಮಾಡುತ್ತಾ ಬಂದಿದ್ದೇನೆ ಅದನ್ನು ಮುಂದಕ್ಕೂ ಮುಂದುವರಿಸುವ ಇಚ್ಛೆ ನನಗಿದೆ. ನನ್ನನ್ನು ಅಡ್ಡ ದಾರಿಯ ಮುಖಾಂತರ ಕಟ್ಟಿ ಹಾಕಬಹುದೆಂದು ಯಾರಾದರೂ ನಿರೀಕ್ಷಿಸಿದರೆ ಅದು ನಿಮ್ಮ ಮೂರ್ಖತನ. ನೀವೆಷ್ಟೇ ತೊಂದರೆ ನೀಡಿದರೂ ನಾನು ಬಡವರ ಪರವಾದ ಸೇವೆಯನ್ನು ಮುಂದುವರಿಸುತ್ತೇನೆ ಎಂದು ಅಶೋಕ್ ರೈ ಹೇಳಿದರು.

Leave a Reply

Your email address will not be published. Required fields are marked *

error: Content is protected !!