ಪುತ್ತೂರಿನಲ್ಲಿ ಜೆಡಿಎಸ್ನಿಂದ ಕಣಕ್ಕಿಳಿಯುವವರು ಯಾರು..?
ಪಕ್ಷದ ತುರ್ತು ಸಭೆಯಲ್ಲಿ ಇಬ್ಬರ ಹೆಸರು ರೇಸ್ನಲ್ಲಿ
ಪುತ್ತೂರು ವಿಧಾನಸಭಾ ಕ್ಷೆತ್ರದಲ್ಲಿ ಒಕ್ಕಲಿಗ ಹಾಗೂ ಮುಸ್ಲಿಂ ಸಮುದಾಯದ ಅತ್ಯಧಿಕ ಮತದಾರರಿದ್ದು ಈ ಹಿನ್ನೆಲೆಯಲ್ಲಿ ಪಕ್ಷದ ನಾಯಕರಾದ ಐ.ಸಿ ಕೈಲಾಸ್ ಅಥವಾ ಅಶ್ರಫ್ ಕಲ್ಲೇಗರಲ್ಲಿ ಒಬ್ಬರನ್ನು ಕಣಕ್ಕಿಳಿಸುವುದಾಗಿ ಎ.4ರಂದು ಪುತ್ತೂರಿನಲ್ಲಿ ನಡೆದ ಜೆಡಿಎಸ್ ಪಕ್ಷದ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಯಿತು.
ಜೆಡಿಎಸ್ ಪುತ್ತೂರು ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಅಶ್ರಫ್ ಕಲ್ಲೇಗ ರವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ವಿವಿಧ ವಿಚಾರಗಳ ಬಗ್ಗೆ ಚರ್ಚೆ ನಡೆಯಿತು. ಚುನಾವಣೆ ಅಧಿಸೂಚನೆ ಹೊರಡಿಸಿದ ತಕ್ಷಣ ನಾಮಪತ್ರ ಸಲ್ಲಿಸುವ ತೀರ್ಮಾನ ಮಾಡಲಾಯಿತು. ಜೆಡಿಎಸ್ ಪಕ್ಷದ ಘೋಷಣೆಗಳನ್ನು ತಳಮಟ್ಟದಲ್ಲಿ ಜನತೆಗೆ ತಲುಪಿಸುವ ಬಗ್ಗೆ ತೀರ್ಮಾನಿಸಲಾಯಿತು.
ಸಭೆಯಲ್ಲಿ ಜೆಡಿಎಸ್ ಪುತ್ತೂರು ವಿಧಾನಸಭಾ ಕ್ಷೇತ್ರ ಹಿಂದುಳಿದ ವರ್ಗಗಳ ಅಧ್ಯಕ್ಷ ಪ್ರಭಾಕರ್ ಸಾಲ್ಯಾನ್, ಜೆಡಿಎಸ್ ಮಾಜಿ ಅಧ್ಯಕ್ಷ ಐ.ಸಿ ಕೈಲಾಸ್, ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಮಹಾವೀರ್ ಜೈನ್, ಚಂದ್ರ ಬೀರಿಗೆ, ನಝೀರ್ ಬಪ್ಪಳಿಗೆ, ಹಂಝ ರಾಮನಗರ ಪದ್ಮಾ ಮಣಿಯನ್, ಇಬ್ರಾಹಿಂ ಕೆದಿಲ, ಫಾರೂಕ್ ಕಲ್ಲೇಗ, ವಿಕ್ಟರ್ ಗೊನ್ಸಾಲಿಸ್ ಸುಂದರ, ಮೋನು ಕಾರ್ಖಾನೆ, ಹಂಝ ಕಬಕ, ಉಪಸ್ಥಿತರಿದ್ದರು.