ಕಾವು: ಆಟೋ ರಿಕ್ಷಾಗೆ ಟಿಪ್ಪರ್ ಡಿಕ್ಕಿ; ರಿಕ್ಷಾ ಚಾಲಕಗೆ ಗಾಯ
ಆಟೋ ರಿಕ್ಷಾಗೆ ಟಿಪ್ಪರ್ ಡಿಕ್ಕಿ ಹೊಡೆದು ರಿಕ್ಷಾ ಚಾಲಕ ಗಾಯಗೊಂಡಿರುವ ಘಟನೆ ಮಾಣಿ -ಮೈಸೂರು ರಾಷ್ಟ್ರೀಯ ಹೆದ್ದಾರಿಯ ಕಾವು ಎಂಬಲ್ಲಿ ಮಾರ್ಚ್ 23ರಂದು ನಡೆದಿದೆ.

ಕಾವು ನಿವಾಸಿ ಬಶೀರ್ ಎಂಬವರ
ಆಟೋ ರಿಕ್ಷಾಗೆ ಪುತ್ತೂರು ಕಡೆಯಿಂದ ಸುಳ್ಯ ಕಡೆ ಹೋಗುತ್ತಿದ್ದ ಟಿಪ್ಪರ್ ಲಾರಿಯೊಂದು ಡಿಕ್ಕಿ ಹೊಡೆದಿದ್ದು ಚಾಲಕ ಬಶೀರ್ ಗಾಯಗೊಂಡಿದ್ದಾರೆ. ರಿಕ್ಷಾ ಸಂಪೂರ್ಣ ಜಖಂಗೊಂಡಿದೆ.
ಗಾಯಾಳು ಬಶೀರ್ ರವರನ್ನು ಸುಳ್ಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಹೆಚ್ಚಿನ ವಿವರ ಇನ್ನಷ್ಟೇ ಲಭ್ಯವಾಗಬೇಕಿದೆ.