ಸರ್ವೆ: ಸ್ಕೂಟರ್ನಲ್ಲಿ ಅಕ್ರಮ ಮದ್ಯ ಮಾರಾಟ-ಆರೋಪಿ ಬಂಧನ
ಪುತ್ತೂರು:ಸರ್ವೆ ಆಟೋ ರಿಕ್ಷಾ ನಿಲ್ದಾಣದ ಬಳಿಯಲ್ಲಿ ಸ್ಕೂಟರ್ವೊಂದರಲ್ಲಿ ಯಾವುದೇ ಪರವಾನಿಗೆ ಇಲ್ಲದೆ ಅಕ್ರಮವಾಗಿ ಮದ್ಯವನ್ನು ಇರಿಸಿಕೊಂಡು ಅಧಿಕ ಬೆಲೆಗೆ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಸಂಪ್ಯ ಪೊಲೀಸರು ಬಂಧಿಸಿದ್ದಾರೆ.
ಮದ್ಯ, ನಗದು ಮತ್ತು ಮಾರಾಟಕ್ಕೆ ಉಪಯೋಗಿಸಿದ ಸ್ಕೂಟರ್ ಅನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಸರ್ವೆ ನಿವಾಸಿ ನಾರಾಯಣ ಗೌಡ ಬಂಧಿತ ಆರೋಪಿ. ಸಂಪ್ಯ ಪೊಲೀಸರು ಮಾ.3ರ ರಾತ್ರಿ ರೌಂಡ್ಸ್ ಕರ್ತವ್ಯದಲ್ಲಿದ್ದಾಗ ಸರ್ವೆ ಆಟೋ ರಿಕ್ಷಾ ನಿಲ್ದಾಣದ ಬಳಿಯಲ್ಲಿ ಬೀದಿ ದೀಪದ ಕೆಳಗೆ ವ್ಯಕ್ತಿಯೊಬ್ಬರು ಸ್ಕೂಟರ್ ನಿಲ್ಲಿಸಿ ಮದ್ಯ ಮಾರಾಟ ಮಾಡುತ್ತಿರುವುದು ಬೆಳಕಿಗೆ ಬಂದಿತ್ತು. ಆತನನ್ನು ವಿಚಾರಣೆ ಮಾಡಿದಾಗ ಅಕ್ರಮ ಮದ್ಯ ಮಾರಾಟ ವಿಚಾರ ಬೆಳಕಿಗೆ ಬಂದಿದೆ.
ಸ್ಕೂಟರ್ನಲ್ಲಿ ರಟ್ಟಿನ ಬಾಕ್ಸ್ನಲ್ಲಿ ಇರಿಸಲಾಗಿದ್ದ 6.120 ಲೀಟರ್ ಮದ್ಯ ತುಂಬಿದ ಸ್ಯಾಚೆಟ್ಗಳನ್ನು ವಶಕ್ಕೆ ಪಡೆದು, ಮದ್ಯ ಮಾರಾಟದಿಂದ ಬಂದಿರುವ ನಗದು ರೂ. 600 ಮತ್ತು ಮದ್ಯ ಮಾರಾಟಕ್ಕೆ ಉಪಯೋಗಿಸಿದ ಸ್ಕೂಟರ್ ಅನ್ನು ವಶಕ್ಕೆ ಪಡೆದುಕೊಂಡು ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.