ಕರಾವಳಿ

ದ.ಕ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಚುನಾವಣೆ ಪೂರ್ವ ತಯಾರಿ ಕಾರ್ಯಗಾರ





ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ತಾಲೂಕುಗಳ ಪೊಲೀಸ್ ಅಧಿಕಾರಿಗಳಿಗೆ ಹಾಗೂ ಚುನಾವಣೆಗೆ ಸಂಬಂಧಿಸಿ ಕರ್ತವ್ಯ ನಿರ್ವಹಿಸುವ ನೋಡಲ್ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಮಾಹಿತಿ ಕಾರ್ಯಗಾರ ಮಾ.1 ರಂದು ಮಂಗಳೂರು ಜಿಲ್ಲಾ ಪೊಲೀಸ್ ಕಚೇರಿ ಸಭಾಂಗಣದಲ್ಲಿ ನಡೆಯಿತು.



ಈ ಕಾರ್ಯಗಾರದಲ್ಲಿ
ಚುನಾವಣೆಗೆ ಸಂಬಂದಿಸಿದ ಕರ್ತವ್ಯಗಳು ಹಾಗೂ ಸಿದ್ಧತೆಗಳ ಬಗ್ಗೆ,ಚುನಾವಣೆ ದೃಷ್ಟಿಯಿಂದ ತೆಗೆದು ಕೊಳ್ಳಬೇಕಾದ ಮುಂಜಾಗ್ರತ ಕ್ರಮಗಳ ಬಗ್ಗೆ,
ಚುನಾವಣೆಗೆ ಸಂಬಂದಿಸಿದ ಕಾನೂನುಗಳ ಬಗ್ಗೆ, ಚುನಾವಣೆ ನೀತಿ ಸಂಹಿತೆ ವಿಷಯಗಳ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ವಿಕ್ರಮ್ ಆಮ್ಟೆ ಮಾಹಿತಿ ನೀಡಿದರು.



ವೇದಿಕೆಯಲ್ಲಿ ದ ಕ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಧರ್ಮಪ್ಪ, ಡಿ ಸಿ ಆರ್ ಬಿ ವಿಭಾಗದ ಡಿ ವೈ ಎಸ್ ಡಾ.ಪಿ ಗಾನ ಪಿ ಕುಮಾರ್, ಪುತ್ತೂರು ವಿಭಾಗದ ಡಿ ವೈ ಎಸ್ ಪಿ ಡಾ.ವೀರಯ್ಯ ಹಿರೇಮಠ್,ಬಂಟ್ವಾಳ ಡಿವೈಎಸ್ಪಿ ಪ್ರತಾಪ್ ತೋರಾಟ್ ಉಪಸ್ಥಿತರಿದ್ದರು.



ದ ಕ ಜಿಲ್ಲಾ ವಿವಿಧ ಪೊಲೀಸ್ ಠಾಣೆಗಳ ಪೊಲೀಸ್ ವೃತ್ತ ನಿರೀಕ್ಷರುಗಳು,ಉಪ ನಿರೀಕ್ಷಕರುಗಳು, ಸಂಬಂಧಿಸಿದ ಅಧಿಕಾರಿಗಳು,ಸಿಬ್ಬಂದಿಗಳು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!