ಜಿಲ್ಲೆ

ಕೊಡಗು: ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿದ ಕೆ.ಎಸ್.ಆರ್.ಟಿ.ಸಿ ಬಸ್- 40 ಮಂದಿಗೆ ಗಾಯ

ಕೊಡಗು: ಚಾಲಕನ ನಿಯಂತ್ರಣ ತಪ್ಪಿದ ಕೆಎಸ್ಆರ್ ಟಿಸಿ ಬಸ್ ಮಂಗಳವಾರ ವಿರಾಜಪೇಟೆ ತಾಲೂಕಿನ ಅಮ್ಮತಿ ಕಾವಾಡಿ ಕಂದಕಕ್ಕೆ ಉರುಳಿದೆ.



ಚಾಲಕ ಸೇರಿದಂತೆ ಬಸ್ ನಲ್ಲಿದ್ದ ಸುಮಾರು 40 ಮಂದಿಗೆ ಗಾಯಗಳಾಗಿವೆ.



ಕೇರಳ ರಾಜ್ಯದ ಎರ್ನಾಕುಲಂನಿಂದ ವಿರಾಜಪೇಟೆ ಮಾರ್ಗವಾಗಿ ಹಾಸನಕ್ಕೆ ಈ ಬಸ್ ತೆರಳುತಿತ್ತು. ನಸುಕಿನ 4 ಗಂಟೆಗೆ ವಿರಾಜಪೇಟೆ ಬಸ್ ನಿಲ್ದಾಣ ದಿಂದ ಬಸ್ ಹೊರಟಿತ್ತು.

ಗಾಯಳುಗಳನ್ನು ವಿರಾಜಪೇಟೆ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ವಿರಾಜಪೇಟೆ ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!