ಕಾವೂರು ಜಾತ್ರೆಯಲ್ಲಿ ಅನ್ಯಮತೀಯರಿಗೆ ವ್ಯಾಪಾರಕ್ಕೆ ಅವಕಾಶ ನಿರಾಕರಿಸಿ ಬ್ಯಾನರ್ ಅಳವಡಿಕೆ :ಡಿವೈಎಫ್ಐ, ಸಿಪಿಐಎಂ ನಿಂದ ಹಿರಿಯ ಪೊಲೀಸ್ ಆಯುಕ್ತರಿಗೆ ಮನವಿ
ಕಾವೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರೆಯಲ್ಲಿ ಅನ್ಯಮತೀಯರಿಗೆ ವ್ಯಾಪಾರಕ್ಕೆ ಅವಕಾಶ ಇಲ್ಲ ಎಂದು ವಿಹಿಂಪ-ಬಜರಂಗದಳ ಬ್ಯಾನರ್ ಅಳವಡಿಸಿದ್ದು ಅದನ್ನು ತೆರವಿಗೆ ಆಗ್ರಹಿಸಿ ಹಾಗೂ ಕರ್ತವ್ಯದಲ್ಲಿ ವಿಫಲರಾದ ಸ್ಥಳೀಯ ಠಾಣೆಯ ಪೊಲೀಸರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಡಿವೈಎಫ್ಐ, ಸಿಪಿಐಎಂ ಹಿರಿಯ ಪೊಲೀಸ್ ಆಯುಕ್ತರಿಗೆ ಮನವಿ ಸಲ್ಲಿಸಿದ್ದಾರೆ.

ಅನಾದಿ ಕಾಲದಿಂದಲೂ ಇಲ್ಲಿನ ಉತ್ಸವದ ಸಂದರ್ಭದಲ್ಲಿ ಸೌಹಾರ್ದದಿಂದ ಎಲ್ಲ ಧರ್ಮದವರೂ ವ್ಯಾಪಾರ ಮಾಡುತ್ತಿದ್ದಾರೆ. ಆದರೆ ಜ. 10ರಂದು ಅನ್ಯ ಧರ್ಮದವರು ಸಂತೆ ವ್ಯಾಪಾರ ನಡೆಸುವುದನ್ನು ಬಹಿಷ್ಠಾರ ಹಾಕಲಾಗಿದೆ ಎಂಬ ಬ್ಯಾನರ್ ಅಳವಡಿಸಲಾಗಿದೆ. ಈ ಬ್ಯಾನರನ್ನು ಸ್ಥಳೀಯ ಪೊಲೀಸರಿಗೆ ಹಾಗೂ ಎಸಿಪಿಯವರಿಗೆ ತಿಳಿಸಿದ ಮೇರೆಗೆ ತೆಗೆಯಲಾಗಿತು.
ಇದೀಗ ಆಡಳಿತ ಮಂಡಳಿಯ ತೀರ್ಮಾನ ಎಂದು ಪೊಲೀಸರು ಹೇಳಿದ್ದರೂ ವಿಹಿಂಪ ಬಜರಂಗದಳ ಹೆಸರಿನಲ್ಲಿ ಬ್ಯಾನರ್ ಹಾಕಲಾಗಿದೆ. ಈ ಹಿನ್ನೆಲೆಯಲ್ಲಿ ಕರ್ತವ್ಯಲೋಪ ಎಸಗಿದ ಪೊಲೀಸರ ವಿರುದ್ದ ಕ್ರಮ ಜರಗಿಸಬೇಕೆಂದು ಸಂಘಟನೆ ಮುಖಂಡರು ಒತ್ತಾಯಿಸಿದ್ದಾರೆ.



