ಮನೆಗೆ ನುಗ್ಗಿ ಚಾಕು ತೋರಿಸಿ ಬಾಲಕಿಯ ಹಣೆಗೆ ಬಿಂದಿಯಿಟ್ಟು ವಿದ್ಯಾರ್ಥಿ ಪರಾರಿ
8 ನೇ ತರಗತಿ ವಿದ್ಯಾರ್ಥಿಯೊಬ್ಬ 6ನೇ ತರಗತಿ ವಿದ್ಯಾರ್ಥಿನಿಯ ಮನೆಗೆ ಏಕಾಏಕಿ ನುಗ್ಗಿ ಆಕೆಯ ಹಣೆಗೆ ಬಿಂದಿಯಿಟ್ಟು ಪರಾರಿಯಾಗಿರುವ ವಿಚಿತ್ರ ಘಟನೆಯೊಂದು ಉತ್ತರಪ್ರದೇಶದಲ್ಲಿ ನಡೆದಿದೆ.
ವಿದ್ಯಾರ್ಥಿ ಮನೆಗೆ ನುಗ್ಗಿ ಚಾಕು ತೋರಿಸುತ್ತಿದ್ದಂತೆಯೇ ವಿದ್ಯಾರ್ಥಿನಿ ಭಯದಿಂದ ಜೋರಾಗಿ ಕಿರುಚಿಕೊಂಡಿದ್ದಾಳೆ. ತಕ್ಷಣವೇ ಸ್ಥಳಕ್ಕೆ ಜನ ಜಮಾಯಿಸುತ್ತಿದ್ದಂತೆಯೇ ಆತ ವಿದ್ಯಾರ್ಥಿನಿ ಹಣೆಗೆ ತಿಲಕವಿಟ್ಟು ಕಾಲ್ಕಿತ್ತಿದ್ದಾನೆ.
ಘಟನೆಯ ಬಳಿ ವಿದ್ಯಾರ್ಥಿನಿ ತಂದೆ ಸ್ಥಳೀಯ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಕೂಡಲೇ ಪೊಲೀಸರು 16 ವರ್ಷದ ವಿದ್ಯಾರ್ಥಿಯನ್ನು ವಶಕ್ಕೆ ಪಡೆದಿದ್ದಾರೆ.
ಬಾಲಕಿ ತನ್ನ ಮನೆಯಲ್ಲಿ ಕಸ ಗುಡಿಸುತ್ತಾ ಇದ್ದ ವೇಳೆ ಅಲ್ಲಿಗೆ ಬಂದ ಇಬ್ಬರು ವಿದ್ಯಾರ್ಥಿಗಳಲ್ಲಿ ಓರ್ವ ಬಾಲಕಿಯ ಕುತ್ತಿಗೆಗೆ ಚಾಕು ಇಟ್ಟು, ಹಣೆಗೆ ಕುಂಕುಮ ಇಟ್ಟಿದ್ದಾನೆ. ಬಳಿಕ ಇಬ್ಬರು ಅಲ್ಲಿಂದ ಎಸ್ಕೇಪ್ ಆಗಿದ್ದಾರೆ. ಬಾಲಕಿಯ ತಂದೆ ಕೆಲಸ ಮುಗಿಸಿ ಮನೆಗೆ ಬಂದಾಗ ನಡೆದ ಘಟನೆಯನ್ನು ಆಕೆ ವಿವರಿಸಿದ್ದಾಳೆ.
ಕೂಡಲೇ ತಂದೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಈ ಕುರಿತು ಎಫ್ಐಆರ್ ದಾಖಲಿಸಿದ್ದಾರೆ. ಘಟನೆಯ ದೃಶ್ಯ ಸಿಸಿಟಿಯಲ್ಲಿ ಸೆರೆಯಾಗಿದ್ದು, ಅದರಲ್ಲಿ ಇಬ್ಬರು ಹುಡುಗರು ಸೈಕಲ್ನಲ್ಲಿ ಬಂದು ಹುಡುಗಿ ಮನೆಯಲ್ಲಿರುವುದನ್ನು ಗಮನಿಸುತ್ತಾರೆ. ನಂತರ ಮನೆಗೆ ನುಗ್ಗಿ ಬಾಲಕಿ ಹಣೆಗೆ ತಿಲಕವಿಟ್ಟು ಪರಾರಿಯಾಗಿರುತ್ತಾರೆ.