ಪುತ್ತೂರು: ಸರ್ವೆಯಲ್ಲಿ ಬಾವಿಗೆ ಬಿದ್ದು ಯುವಕ ಮೃತ್ಯು
ಪುತ್ತೂರು:ಯುವಕನೋರ್ವ ಬಾವಿಗೆ ಬಿದ್ದು ಸಾವನ್ನಪ್ಪಿರುವ ಘಟನೆ ಸರ್ವೆ ಗ್ರಾಮದ ಬೊಟ್ಯಾಡಿ ಎಂಬಲ್ಲಿ ಡಿ.5ರಂದು ನಡೆದಿದೆ.
ಸರ್ವೆ ಗ್ರಾಮದ ಕಡ್ಯ ನಿವಾಸಿ ಬಾಬಣ್ಣ ಗೌಡರ ಪುತ್ರ ಕುಶಾಲಪ್ಪ ಗೌಡ (39.ವ) ಮೃತ ಯುವಕ.
ಕುಶಾಲಪ್ಪ ಗೌಡ ಅವರು ಬೊಟ್ಯಾಡಿ ಅನಂತು ಭಂಡಾರಿ ಅವರ ಮನೆಗೆ ತೆಂಗಿನ ಕಾಯಿ ಸುಲಿಯುವ ಕೆಲಸಕ್ಕೆ ತೆರಳಿದ್ದು ಅಲ್ಲಿ ತೋಟದಲ್ಲಿರುವ ಕೆರೆಗೆ ಬಿದ್ದು ಸಾವನ್ನಪ್ಪಿದ್ದಾರೆ.
ಸ್ಥಳಕ್ಕೆ ಸಂಪ್ಯ ಪೊಲೀಸರು ಭೇಟಿ ನೀಡಿದ್ದಾರೆ.