ಉಡುಪಿ: ಆರೈಕೆ ಮಾಡುತ್ತಿದ್ದ ವೃದ್ಧೆಯ ಲಕ್ಷಾಂತರ ಮೌಲ್ಯದ ಚಿನ್ನದ ಸರ ಕದ್ದ ಹೋಂ ನರ್ಸ್
ಉಡುಪಿ : ಆರೈಕೆ ಮಾಡುತ್ತಿದ್ದ ವೃದ್ದೆಯ ಕುತ್ತಿಗೆಗೆ ಕೈ ಹಾಕಿ ಲಕ್ಷಾಂತರ ಮೌಲ್ಯದ ಚಿನ್ನದ ಸರ ಕದ್ದ ಹೋಂ ನರ್ಸನ್ನು ಉಡುಪಿ ಪೊಲೀಸರು ಬಂಧಿಸಿದ್ದಾರೆ.
ರೇಖಾ ಹೆಬ್ಬಾಳ್ಳಿ ಬಂಧಿತ ಆರೋಪಿ. ಹೋಂ ನರ್ಸ್ ಕೆಲಸಕ್ಕೆ ಚೆನ್ನಿಬೆಟ್ಟು ಮದಗದ ನಿವಾಸಿ ವಯೋ ವೃದ್ದೇ ಸರಸ್ವತಿ(98) ರವರ ಆರೈಕೆಯನ್ನು ನೋಡಿಕೊಳ್ಳಲು ಹೋಂ ನರ್ಸ್ ಆಗಿ ನೇಮಿಸಿದ್ದರು.
ಕೆಲವು ದಿನಗಳವರೆಗೆ ಕೆಲಸ ಮಾಡಿದ ರೇಖಾ ನವೆಂಬರ್ 21 ರಂದು ಮನೆಯಲ್ಲಿ ಯಾರೂ ಇಲ್ಲದ ಸಮಯ ಸರಸ್ವತಿರವರ ಕುತ್ತಿಗೆಯಲ್ಲಿದ್ದ ಸುಮಾರು 1, 45,000 ಮೌಲ್ಯದ ಚಿನ್ನದ ಸರವನ್ನು ಕಳವು ಮಾಡಿ ಪರಾರಿಯಾಗಿದ್ದಳು.
ಈ ಬಗ್ಗೆ ವೃದ್ದೆ ಸರಸ್ವತಿ ರವರ ಮಗ ವಸಂತ ಶೆಟ್ಟಿ ನೀಡಿದ ದೂರಿನ ಮೇರೆಗೆ ಹಿರಿಯಡ್ಕ ಪೊಲೀಸರು ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿ ಅದೇ ದಿನ ಉಡುಪಿಯಲ್ಲಿ ರೇಖಾ ಹೆಬ್ಬಳ್ಳಿ ಬಾಗಲಕೋಟೆ ಎಂಬವಳನ್ನು ವಶಕ್ಕೆ ಪಡೆದು ಕಳವು ಮಾಡಿದ್ದ ಚಿನ್ನವನ್ನು ಸ್ವಾಧೀನ ಪಡಿಸಿಕೊಳ್ಳಲು ಯಶಸ್ವಿಯಾಗಿದ್ದರು.
ಆರೋಪಿ ರೇಖಾಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು ನ್ಯಾಯಾಂಗ ಬಂಧನ ವಿಧಿಸಿದ್ದಾರೆ.