ವಿದೇಶಿ ಉದ್ಯೋಗಿಗಳಿದ್ದ ವಸತಿ ಗೃಹಗಳಲ್ಲಿ ಬೆಂಕಿ: 9 ಮಂದಿ ಭಾರತೀಯರು ಸಾವು
ಮಾಲ್ಡೀವ್ಸ್ ರಾಜಧಾನಿ ಮಾಲೆಯಲ್ಲಿ ವಿದೇಶಿ ಉದ್ಯೋಗಿಗಳಿದ್ದ ವಸತಿಗೃಹಗಳಲ್ಲಿ ಬೆಂಕಿ ಕಾಣಿಸಿಕೊಂಡು ಕನಿಷ್ಠ 10 ಮಂದಿ ಸಾವನ್ನಪ್ಪಿದ್ದು ಮತ್ತು ಹಲವರು ಗಾಯಗೊಂಡಿರುವ ಘಟನೆ ಗುರುವಾರ ಸಂಭವಿಸಿದೆ.

ನೆಲಮಹಡಿಯಲ್ಲಿರುವ ಗ್ಯಾರೇಜ್‌ನಿಂದ ಉಂಟಾದ ಬೆಂಕಿ ಇಡೀ ಕಟ್ಟಡಕ್ಕೆ ವ್ಯಾಪಿಸಿದ್ದು ಘಟನೆಯಲ್ಲಿ ಒಂಬತ್ತು ಮಂದಿ ಭಾರತೀಯರು ಸೇರಿ ಒಟ್ಟು ಹತ್ತು ಮಂದಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಅಗ್ನಿಶಾಮಕ ವಾಹನಗಳು ದೌಡಾಯಿಸಿದ್ದು ಬೆಂಕಿ ನಂದಿಸಲು ಹರಸಾಹಸ ಪಡಬೇಕಾಯಿತು. ಅಷ್ಟೋತ್ತಿಗಾಗಲೇ ಹತ್ತು ಮಂದಿ ಜೀವಕಳೆದುಕೊಂಡಿದ್ದರು.
ಸತತ ನಾಲ್ಕು ಗಂಟೆಗಳ ಕಾರ್ಯಾಚರಣೆಯಲ್ಲಿ 10 ಮೃತ ದೇಹಗಳನ್ನು ಕಟ್ಟಡದಿಂದ ಹೊರತೆಗೆಯಲಾಗಿದ್ದು, ಹಲವಾರು ಗಂಭೀರ ಗಾಯಗೊಂಡಿದ್ದಾರೆ, ಗಾಯಗೊಂಡವರನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಲಾಗಿದ್ದು, ಮೃತರಲ್ಲಿ ಒಂಬತ್ತು ಮಂದಿ ಭಾರತೀಯರು ಹಾಗೂ ಓರ್ವ ಬಾಂಗ್ಲಾ ಪ್ರಜೆ ಸೇರಿದ್ದಾರೆ.