ಕರಾವಳಿ

ಆಲಂಕಾರು: ಭೀಕರ ಅಪಘಾತ, ಓರ್ವ ಮೃತ್ಯು, ಮೂವರಿಗೆ ಗಾಯ


ಕಡಬ: ಕಡಬ ತಾಲೂಕಿನ ಅಲಂಕಾರು ಗ್ರಾಮದ ನೆಕ್ಕರೆ ಎಂಬಲ್ಲಿ ಕಾರು ಮತ್ತು ಮಹೇಂದ್ರ ಜೀತೋ ವಾಹನದ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಓರ್ವ ಮೃತಪಟ್ಟಿದ್ದು, ಮೂವರು ಗಾಯಗೊಂಡ ಘಟನೆ ನ.14ರಂದು ಬೆಳಿಗ್ಗೆ ನಡೆದಿದೆ.


ಕಡಬ ಕಡೆಯಿಂದ ಉಪ್ಪಿನಂಗಡಿ ಕಡೆಗೆ ಕಾರು ತೆರಳುತ್ತಿದ್ದ ವೇಳೆ, ಎದುರಿನಿಂದ ಹಣ್ಣುಹಂಪಲು ತುಂಬಿಸಿಕೊಂಡು ಬರುತ್ತಿದ್ದ ಮಹೇಂದ್ರ ಜೀತೊ ವಾಹನಕ್ಕೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಅಪಘಾತದ ಪರಿಣಾಮ ಮಹೇಂದ್ರ ಜೀತೊ ವಾಹನದ ಚಾಲಕ ಖಲೀಲ್, ಸಹ ಪ್ರಯಾಣಿಕ ತಮೀಮ್ ಅವರನ್ನು ಸ್ಥಳೀಯರು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದು, ಈ ವೇಳೆ ತಮೀಮ್ ಎಂಬವರು ಆಸ್ಪತ್ರೆಗೆ ಕರೆತಂದಾಗ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.


ಈ ಕುರಿತು ಕಡಬ ಪೊಲೀಸ್ ಠಾಣೆಯಲ್ಲಿ ಅ.ಕ್ರ. 138/2026, ಕಲಂ 281, 125(a), 106 BNS-2023ರಂತೆ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *

error: Content is protected !!