ಕರಾವಳಿ

ಬೆಳ್ತಂಗಡಿ: ಪಟಾಕಿ ಸಿಡಿಸುವ ವೇಳೆ ಯುವಕನ ಕಾಲಿಗೆ ತೀವ್ರ ಗಾಯ- ಆಸ್ಪತ್ರೆಗೆ ದಾಖಲು


ಬೆಳ್ತಂಗಡಿ: ತನ್ನ ಮನೆಯ ಅಂಗಳದಲ್ಲಿ ಪಟಾಕಿ ಸಿಡಿಸುತ್ತಿದ್ದಾಗ ಆಕಸ್ಮಿಕವಾಗಿ ಪಟಾಕಿ ಸಿಡಿದು ಯುವಕನ ಕಾಲಿಗೆ ತೀವ್ರ ಗಾಯಗಳಾದ ಘಟನೆ ನ.9ರಂದು ಸಂಜೆನಡೆದಿದೆ.




ಗಾಯಗೊಂಡ ಯುವಕನನ್ನು ಬೆಳ್ತಂಗಡಿ ತಾಲೂಕಿನ ಕೊಯ್ಯೂರು ಗ್ರಾಮದ ಮಲೆಬೆಟ್ಟು ಸಮೀಪದ ಪೊರ್ನಕಂಡ ನಿವಾಸಿ ಲಿಕೇಶ್ ಗೌಡ(20) ಎಂದು ಗುರುತಿಸಲಾಗಿದೆ.


ಅವರ ಕುಟುಂಬ ಸದಸ್ಯರು ಮತ್ತು ಸ್ನೇಹಿತರು ತಕ್ಷಣ ಅವರನ್ನು ಉಜಿರೆಯ ಖಾಸಗಿ ಆಸ್ಪತ್ರೆಗೆ ಕರೆದೊಯ್ದರು. ಆದರೆ, ಗಾಯಗಳ ತೀವ್ರತೆಯನ್ನು ಪರಿಗಣಿಸಿ, ನಂತರ ಅವರನ್ನು ಹೆಚ್ಚಿನ ವೈದ್ಯಕೀಯ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *

error: Content is protected !!