ಕರಾವಳಿ

ಬಿ.ಸಿ.ರೋಡ್ ಫ್ಲೈಓವರ್ ನಿಂದ ಕೆಳಗೆ ಬಿದ್ದ ಬೈಕ್! ಸವಾರನಿಗೆ ಗಂಭೀರ ಗಾಯ


ಬಂಟ್ವಾಳ: ಬುಲೆಟ್‌ ಬೈಕ್‌ ಸವಾರ ತನ್ನ ವಾಹನದ ನಿಯಂತ್ರಣ ತಪ್ಪಿ ಬಿ.ಸಿ. ರೋಡ್ ಫ್ಲೈಓವರ್ ನಿಂದ ಕೆಳಗಿನ ಸರ್ವಿಸ್ ರಸ್ತೆಗೆ ಬಿದ್ದು ಗಂಭೀರ ಗಾಯಗೊಂಡ ಘಟನೆ ನ.9 ರಂದು ನಡೆದಿದೆ. ಎರಡು ಬೈಕ್‌ಗಳು ಫ್ಲೈಓವರ್‌ನಲ್ಲಿ ಪ್ರಯಾಣಿಸುತ್ತಿದ್ದಾಗ ಈ ಘಟನೆ ಸಂಭವಿಸಿದೆ ಎಂದು ತಿಳಿದು ಬಂದಿದೆ.




ಸವಾರ ಮತ್ತು ಬೈಕ್‌ ಕೆಳಗಿನ ಸರ್ವಿಸ್ ರಸ್ತೆಗೆ ಬಿದ್ದಿದೆ. ಅದೃಷ್ಟವಶಾತ್, ಆ ಸಮಯದಲ್ಲಿ ಸರ್ವಿಸ್ ರಸ್ತೆಯಲ್ಲಿ ಯಾವುದೇ ವಾಹನಗಳು ಹಾದುಹೋಗದ ಕಾರಣ, ದೊಡ್ಡ ದುರಂತವೊಂದು ತಪ್ಪಿದೆ. ಸವಾರ ಹೆಲ್ಮೆಟ್ ಧರಿಸಿದ್ದರು. ಘಟನೆಯಿಂದ ಬೈಕ್ ಸವಾರನಿಗೆ ಗಂಭೀರ ಗಾಯಗಳಾಗಿವೆ ಎಂದು ವರದಿಯಾಗಿದೆ.

Leave a Reply

Your email address will not be published. Required fields are marked *

error: Content is protected !!