ಸಾವಿರಾರು ವಿದ್ಯಾರ್ಥಿಗಳ ಭವಿಷ್ಯಕ್ಕೆ ಬೆಳಕಾದ ರಫೀಕ್ ಮಾಸ್ಟರ್‌ಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯ ಗೌರವ
ಪುತ್ತೂರು: ಶಿಕ್ಷಣ ಹಾಗೂ ಸಮಾಜ ಸೇವಾ ಕ್ಷೇತ್ರದಲ್ಲಿ ಸುದೀರ್ಘ ಸೇವಾನುಭವದಿಂದ ಸೇವೆ ಸಲ್ಲಿಸುತ್ತಿರುವ ಖ್ಯಾತ ಪ್ರೇರಣಾ ಭಾಷಣಗಾರ ರಫೀಕ್ ಮಾಸ್ಟರ್ ಅವರಿಗೆ 2026ನೇ ಸಾಲಿನ ದ.ಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಲಾಗಿದೆ.

ಮೂಲತಃ ಕಡಬ ತಾಲೂಕಿನ ಕೊಯಿಲು ಗ್ರಾಮದ ಆತೂರು ನಿವಾಸಿಯಾಗಿರುವ ಪ್ರಸ್ತುತ ಮಂಗಳೂರಿನಲ್ಲಿ ನೆಲೆಸಿರುವ ರಫೀಕ್ ಮಾಸ್ಟರ್ ಅವರು ತರಬೇತುದಾರರಾಗಿದ್ದು ಸಾವಿರಾರು ವಿದ್ಯಾರ್ಥಿಗಳ ಭವಿಷ್ಯದ ಪಾಲಿನ ಬೆಳಕಾಗಿದ್ದಾರೆ.
ಸಂಘ ಸಂಸ್ಥೆ, ಶಿಕ್ಷಣ ಸಂಸ್ಥೆ ಹೊರತಾಗಿ ತಮ್ಮ ಮನೆಯಲ್ಲೇ ನೂರಾರು ವಿದ್ಯಾರ್ಥಿಗಳಿಗೆ ಉಚಿತ ಕೌನ್ಸೆಲಿಂಗ್, ತರಬೇತಿಗಳನ್ನು ಉಚಿತವಾಗಿ ನಡೆಸಿಕೊಟ್ಟಿರುವ ಇವರು ವಿದೇಶದಲ್ಲೂ ತಮ್ಮ ಪ್ರೇರಣದಾಯಕ ಭಾಷಣಗಳ ಮೂಲಕ ಅಪಾರ ಶಿಷ್ಯ ವರ್ಗ ಹಾಗೂ ಅಭಿಮಾನಿ ವರ್ಗವನ್ನು ಹೊಂದಿದ್ದಾರೆ. ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸಕ್ರಿಯರಾಗಿರುವ ಇವರು ಎಜುಕೇಶನಲ್ ಎಕ್ಸಲೆನ್ಸ್ ಫೌಂಡೇಶನ್ ಸಂಸ್ಥೆಯ ಕೌನ್ಸಿಲರ್ ಆಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.



