ಕರಾವಳಿ

ಇಂದು(ಸೆ.11)ಅಂಙತ್ತಡ್ಕದಲ್ಲಿ ಗ್ರ್ಯಾಂಡ್ ಬುರ್ದಾ ಮಜ್ಲಿಸ್, ನಅತೇ ಶರೀಫ್ ಆಲಾಪನೆ



ಪುತ್ತೂರು: ತಿಂಗಳಾಡಿ ಸಮೀಪದ ಅಂಙತ್ತಡ್ಕದಲ್ಲಿ ದಾರುಲ್ ಮುರ್ತಳ ದರ್ಸ್ ಕಟ್ಟಡ ಉದ್ಘಾಟನೆ ಪ್ರಯುಕ್ತ ಆಯೋಜಿಸಿದ್ದ 2 ದಿನಗಳ ಕಾರ್ಯಕ್ರಮದ ಸಮಾರೋಪ ಹಾಗೂ ಗ್ರ್ಯಾಂಡ್ ಬುರ್ದಾ ಮಜ್ಲಿಸ್ ಮತ್ತು ನಅತೇ ಶರೀಫ್ ಆಲಾಪನೆ ಸೆ.11ರಂದು ಮಗ್ರಿಬ್ ನಮಾಜಿನ ಬಳಿಕ ಅಂಙತ್ತಡ್ಕ ಖುರ್ರತುಸ್ಸದಾತ್ ನಗರದಲ್ಲಿ ನಡೆಯಲಿದೆ.



ಅಸ್ಸಯ್ಯದ್ ಅಹ್ಮದ್ ಪೂಕೋಯ ತಂಙಳ್ ಪುತ್ತೂರು ಉದ್ಘಾಟಿಸಲಿದ್ದು ಸಯ್ಯದ್ ಜಾಫರ್ ನುಹ್‌ಮಾನ್ ತಂಙಳ್ ದುವಾ ನೆರವೇರಿಸಲಿದ್ದಾರೆ. ಮಹಮ್ಮದ್ ಮುಸ್ಲಿಯಾರ್ ಅಧ್ಯಕ್ಷತೆ ವಹಿಸಲಿದ್ದು ಹುಸೈನ್ ಸಅದಿ ಕೆ.ಸಿ ರೋಡ್ ಮುಖ್ಯ ಪ್ರಭಾಷಣ ನಡೆಸಲಿದ್ದಾರೆ. ಅಸ್ಸಯ್ಯದ್ ಜಲಾಲುದ್ದೀನ್ ಪೂಕೋಯ ತಂಙಳ್ ರಿಫಾಯಿಯವರು ಸಮಾರೋಪ ದುವಾ ನಡೆಸಲಿದ್ದಾರೆ.



ಬಳಿಕ ಅನ್ವರ್ ಅಲಿ ಸಖಾಫಿ ಶಿರಿಯ ತಂಡದವರಿಂದ ಗ್ರ್ಯಾಂಡ್ ಮಜ್ಲಿಸ್ ಹಾಗೂ ಮುಈನುದ್ದೀನ್ ಖಾದ್ರಿ ಬೆಂಗಳೂರು ಅವರಿಂದ ನಅತೇ ಶರೀಫ್ ಆಲಾಪನೆ ನಡೆಯಲಿದೆ. ಮದ್ಹ್ ಆಲಾಪನೆಯನ್ನು ನಾಸಿರ್ ಕ್ಯಾಲಿಕಟ್, ಮುಬೀನ್  ಹಿಮಮಿ ಬಂಡಿಚ್ಚಾಲ್, ಮುಜೀಬ್ ಹಿಮಮಿ ಬಾಯಾರ್, ಶಾಕಿರ್ ಹಿಮಮಿ ನಿರ್ವಹಿಸಲಿದ್ದಾರೆ. ಹಲವು ಗಣ್ಯರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಸಂಘಟಕರು ತಿಳಿಸಿದ್ದಾರೆ

Leave a Reply

Your email address will not be published. Required fields are marked *

error: Content is protected !!