ದರ್ಬೆ ಪ್ರಕರಣ ಖಂಡಿಸಿ ಇಂದು ನಡೆಯಬೇಕಿದ್ದ ಎಸ್‌ಡಿಪಿಐ ಪ್ರತಿಭಟನೆ ರದ್ದು
ಪುತ್ತೂರು: ದರ್ಬೆ ಪ್ರಕರಣವನ್ನು ಖಂಡಿಸಿ ಎಸ್‌ಡಿಪಿಐ ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿ ವತಿಯಿಂದ ಸೆ.2ರಂದು ಪುತ್ತೂರಿನ ಗಾಂಧಿ ಕಟ್ಟೆ ಬಳಿ ನಡೆಸಲು ಉದ್ದೇಶಿಸಿದ್ದ ಪ್ರತಿಭಟನೆಯನ್ನು ರದ್ದುಗೊಳಿಸಲಾಗಿದೆ.

ಪ್ರತಿಭಟನೆಯಲ್ಲಿ ಧ್ವನಿವರ್ಧಕ ಬಳಸಲು ಪೊಲೀಸ್ ಇಲಾಖೆ ಅನುಮತಿ ನಿರಾಕರಿಸಿರುವ ಹಿನ್ನೆಲೆಯಲ್ಲಿ ಪ್ರತಿಭಟನೆ ರದ್ದುಗೊಳಿಸಲಾಗಿದೆ ಎಂದು ಎಸ್‌ಡಿಪಿಐ ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷ ಅಶ್ರಫ್ ಬಾವು ತಿಳಿಸಿದ್ದಾರೆ.



