ಕರಾವಳಿಕ್ರೈಂ

ಉಪ್ಪಿನಂಗಡಿಯಲ್ಲಿ ಹಲ್ಲೆ ಆರೋಪ: 9 ಜನರ ವಿರುದ್ಧ ಪ್ರಕರಣ ದಾಖಲು

ಉಪ್ಪಿನಂಗಡಿ ಠಾಣಾ ವ್ಯಾಪ್ತಿಯ ಫಾಯಿಝಾ (18) ಎಂಬವರು ನೀಡಿದ ದೂರಿನಂತೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದ ಆರೋಪದಡಿ 9 ಜನರ ವಿರುದ್ಧ ಪ್ರಕರಣ ದಾಖಲಾಗಿದೆ.

ಆ.12ರಂದು ರಾತ್ರಿ ಫಾಯಿಝಾ ಅವರನ್ನು ಮನೆಗೆ ಬಿಟ್ಟು ಸಿಪ್ನಾನ್‌, ಝಾಹಿರ್‌ ಹಾಗೂ ಸಫಿಯಾ ಅವರು ಕಡಬದ ಕೊಣಾಲು ಕೋಲ್ಪೆ ಕಡೆಗೆ ತೆರಳಿದ್ದರು. ಈ ವೇಳೆ ಜಾಬಿರ್‌, ಸಿದ್ದೀಕ್‌, ಉನೈಸ್‌, ರಂಶಿಕ್‌, ಸಂಶುದ್ದೀನ್‌, ಜಾಫರ್‌, ಆಶಿತ್‌, ಆಚೂರು ಅಶ್ರಫ್‌ ಹಾಗೂ ಅಶ್ರಫ್‌ ಕೋಲ್ಪೆ ಅವರು ಅವರನ್ನು ಅಕ್ರಮವಾಗಿ ತಡೆದು ಅವಾಚ್ಯವಾಗಿ ಬೈದು ಹಲ್ಲೆ ನಡೆಸಿ ನಿಂದಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಬಳಿಕ ಸ್ಥಳಕ್ಕೆ ಬಂದ ಫಾಯಿಝಾ, ಜಮಾಲ್‌ ಹಾಗೂ ಫಾಯಿಝಾ ಅವರ ತಂಗಿಯನ್ನೂ ನಿಂದಿಸಿ ಹಲ್ಲೆ ನಡೆಸಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಕುರಿತು ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಅ.ಕ್ರ. 107/2026ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

Leave a Reply

Your email address will not be published. Required fields are marked *

error: Content is protected !!