ಕರಾವಳಿಕ್ರೈಂ

ಬೆಳ್ತಂಗಡಿ: ವಿದ್ಯುತ್ ಕಂಬ ಮೈಮೇಲೆ ಬಿದ್ದು ಕಾರ್ಮಿಕ ಮೃತ್ಯು



ಬೆಳ್ತಂಗಡಿ: ವಿದ್ಯುತ್ ಕಂಬ ಅಳವಡಿಕೆ ಕಾಮಗಾರಿ ವೇಳೆ ಕಂಬ ಮೈಮೇಲೆ ಬಿದ್ದ ಪರಿಣಾಮ ಕಾರ್ಮಿಕರೊಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಸೋಮವಾರ ಸಂಜೆ ಬೆಳ್ತಂಗಡಿ ತಾಲೂಕಿನ ಕೊಕ್ಕಡದಲ್ಲಿ ನಡೆದಿರುವುದು ವರದಿಯಾಗಿದೆ.

ಸಾಂದರ್ಭಿಕ ಚಿತ್ರ



ಮೃತರನ್ನು ಕೊಕ್ಕಡ ಗ್ರಾಮದ ಶಿವಪ್ಪ (40) ಎಂದು ಗುರುತಿಸಲಾಗಿದೆ. ಕಂಬ ಅಳವಡಿಕೆ ಕಾಮಗಾರಿ ವೇಳೆ ದುರ್ಘಟನೆ
ಇವರು ಪುರುಷೋತ್ತಮ ಎಂಬ ಗುತ್ತಿಗೆದಾರರ ಕೆಳಗೆ ಕೆಲವು ವರ್ಷಗಳಿಂದ ಕೂಲಿ ಕಲಸ ಮಾಡುತ್ತಿದ್ದರು. ಸೋಮವಾರ ಕೊಕ್ಕಡ ಶ್ರೀರಾಮ ಭಜನಾ ಮಂದಿರದ ಬಳಿ ವಿದ್ಯುತ್ ಕಂಬ ಅಳವಡಿಕೆ ಕಾಮಗಾರಿ ವೇಳೆ ಯಾವುದೇ ಸುರಕ್ಷತಾ ಪರಿಕರಗಳನ್ನು ಧರಿಸದೆ ಕೆಲಸ ಮಾಡುತ್ತಿದ್ದರು.
ಈ ವೇಳೆ ಕಂಬವು ಶಿವಪ್ಪರ ಮೇಲೆ ಬಿದ್ದಿದ್ದು, ಗಂಭೀರ ಗಾಯಗೊಂಡ ಅವರು ಸ್ಥಳದಲ್ಲೇ ಮೃತಪಟ್ಟಿರುವುದಾಗಿ ತಿಳಿದುಬಂದಿದೆ. ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!