ಟಿ20 ವಿಶ್ವಕಪ್ ಗೆದ್ದ ಟೀಂ ಇಂಡಿಯಾಗೆ ಸಿಕ್ಕಿದ ನಗದು ಬಹುಮಾನ ಎಷ್ಟು ಗೊತ್ತೇ?
ಅಹಮದಾಬಾದ್: ಟಿ20 ವಿಶ್ವಕಪ್ 2026ರ ಚಾಂಪಿಯನ್ ಆಗಿ ಟೀಂ ಇಂಡಿಯಾ ಹೊರಹೊಮ್ಮಿದ್ದು ಫೈನಲ್ ಪಂದ್ಯದಲ್ಲಿ ಭಾರತ 5 ವಿಕೆಟ್ ನಷ್ಟಕ್ಕೆ 255 ರನ್ ಹೊಡೆದರೆ ನ್ಯೂಜಿಲೆಂಡ್ 159 ರನ್‌ಗಳಿಸಿ ಆಲೌಟ್ ಆಯಿತು. 96 ರನ್‌ಗಳ ಭರ್ಜರಿ ಜಯದೊಂದಿಗೆ ಭಾರತ ಒಟ್ಟಾರೆ ಮೂರನೇ ಬಾರಿಗೆ ಹಾಗೂ ಸತತ ಎರಡನೇ ಬಾರಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದೆ.

ಟಿ20 ವಿಶ್ವಕಪ್ ಜಯಿಸಿದ ಭಾರತಕ್ಕೆ 27 ಕೋಟಿ ರೂ. ನಗದು ಬಹುಮಾನ ಸಿಕ್ಕಿದರೆ, ರನ್ನರ್ ಅಪ್ ಆಗಿರುವ ನ್ಯೂಜಿಲೆಂಡಿಗೆ 14.65 ಕೋಟಿ ರೂ. ನಗದು ಬಹುಮಾನ ಸಿಕ್ಕಿದೆ.





