ಕರಾವಳಿ

ಕೌಡಿಚ್ಚಾರು: ಅಂತ್ಯ ಸಂಸ್ಕಾರಕ್ಕೆ ಅರಿಯಡ್ಕ ವಲಯ
ಕಾಂಗ್ರೆಸ್‌ನಿಂದ ರೂ.10 ಸಾವಿರ ಧನಸಹಾಯ


ಪುತ್ತೂರು: ಅರಿಯಡ್ಕ ಗ್ರಾಮದ ಪಾಪೆಮಜಲು ಪ್ರೌಢಶಾಲೆಯಲ್ಲಿ ಅಡುಗೆ ಸಹಾಯಕಿಯಾಗಿದ್ದ ಜಯಲಕ್ಷ್ಮೀಯವರ ಪತಿ ಶಶಿಧರ ಭಂಡಾರಿಯವರು ಇತ್ತೀಚೆಗೆ ನಿಧನರಾಗಿದ್ದು ಇವರ ಅಂತ್ಯ ಸಂಸ್ಕಾರಕ್ಕೆ ಅರಿಯಡ್ಕ ವಲಯ ಕಾಂಗ್ರೆಸ್‌ನಿಂದ ರೂ.10 ಸಾವಿರ ಧನ ಸಹಾಯ ನೀಡಲಾಯಿತು.

ಅರಿಯಡ್ಕ ವಲಯ ಕಾಂಗ್ರೆಸ್ ಅಧ್ಯಕ್ಷ ಇಕ್ಬಾಲ್ ಹುಸೇನ್ ಕೌಡಿಚ್ಚಾರ್, ಉದ್ಯಮಿಗಳಾದ ಸುರೇಂದ್ರ ಕುಲಾಲ್ ಬೆಂಗಳೂರು, ರಫೀಕ್ ದರ್ಖಾಸ್, ಲೋಕೇಶ್ ಶೆಟ್ಟಿ ಪಾಪೆಮಜಲು, ವನರಾಜ್ ಸಿಆರ್‌ಸಿ ಕೌಡಿಚ್ಚಾರು ಉಪಸ್ಥಿತರಿದ್ದರು.


3 ಮಂದಿಗೆ ಧನ ಸಹಾಯ:
ಗ್ರಾಮದಲ್ಲಿರುವ ಬಡ ಜನರಿಗೆ ಅರಿಯಡ್ಕ ವಲಯ ಕಾಂಗ್ರೆಸ್‌ನಿಂದ ವಿವಿಧ ರೀತಿಯಲ್ಲಿ ಆರ್ಥಿಕ ಸಹಕಾರ ನೀಡುತ್ತಾ ಬರುತ್ತಿದ್ದು ಈಗಾಗಲೇ ಪಾಪೆಮಜಲು ರಾಜೇಶ್‌ರವರಿಗೆ ಚಿಕಿತ್ಸಾ ವೆಚ್ಚಕ್ಕೆ ಧನ ಸಹಾಯ ಮಾಡಲಾಗಿದೆ. ಇದಲ್ಲದೆ ಕಾಂಗ್ರೆಸ್ ಕಾರ್ಯಕರ್ತ ಗುರುವಪ್ಪರವರ ಅಂತ್ಯ ಸಂಸ್ಕಾರಕ್ಕೆ ಹಾಗೂ ಶಶಿಧರ ಭಂಡಾರಿಯವರ ಅಂತ್ಯ ಸಂಸ್ಕಾರಕ್ಕೆ ಧನ ಸಹಾಯ ನೀಡಲಾಗಿದೆ. ಗ್ರಾಮದಲ್ಲಿ ಸದಾ ಬಡವರ ಪರವಾಗಿ ಕೆಲಸ ಮಾಡುತ್ತಿರುವ ಅರಿಯಡ್ಕ ವಲಯ ಕಾಂಗ್ರೆಸ್ ಅಧ್ಯಕ್ಷ ಇಕ್ಬಾಲ್ ಹುಸೈನ್ ಕೌಡಿಚ್ಚಾರ್‌ರವರ ಈ ಕಾರ್ಯಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಯಾರಿಗೇ ಆಗಲಿ ಕಷ್ಟ ಕಾಲದಲ್ಲಿ ನೆರವಾಗುವುದು ನಮ್ಮ ಧರ್ಮ ಎಂದು ಇಕ್ಬಾಲ್ ಹುಸೇನ್ ತಿಳಿಸಿದರು.

Leave a Reply

Your email address will not be published. Required fields are marked *

error: Content is protected !!